ನವದೆಹಲಿ: ವಾಣಿಜ್ಯ ಉದ್ದೇಶಕ್ಕೆ ಬಳಸಲ್ಪಡುವ ಎಲ್‌ಪಿಜಿ ಸಿಲಿಂಡರ್ ದರವನ್ನು ಇಂದು(ಡಿ.1) ಮತ್ತೆ ಹೆಚ್ಚಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹21ರಷ್ಟು ಏರಿಕೆ ಮಾಡಲಾಗಿದೆ
ನವದೆಹಲಿ: ವಾಣಿಜ್ಯ ಉದ್ದೇಶಕ್ಕೆ ಬಳಸಲ್ಪಡುವ ಎಲ್‌ಪಿಜಿ ಸಿಲಿಂಡರ್ ದರವನ್ನು ಇಂದು(ಡಿ.1) ಮತ್ತೆ ಹೆಚ್ಚಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹21ರಷ್ಟು ಏರಿಕೆ ಮಾಡಲಾಗಿದೆ
ಜೆಟ್ ಇಂಧನ ಅಥವಾ ಎಟಿಎಫ್ ಬೆಲೆಯನ್ನು ಶೇ 4.6 ರಷ್ಟು ಕಡಿತಗೊಳಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ATF) ಬೆಲೆಯನ್ನು ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್‌ಗೆ ₹1,11,344.92 ರಿಂದ ₹1,06,155.67ಗೆ ಇಳಿಸಲಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ನೀಡಿದ ಮಾಹಿತಿಯಂತೆ ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು 19 ಕೆಜಿ ಸಿಲಿಂಡರ್‌ಗೆ ₹1,775.50 ರಿಂದ ₹1,796.50ಗೆ ಹೆಚ್ಚಿಸಲಾಗಿದೆ. ಮುಂಬೈನಲ್ಲಿ 1,728 ರಿಂದ 1,749 ರೂ.ಗೆ ಏರಿಕೆ ಕಂಡಿದೆ.