ಕುಂಬಳೆ: ರಾಜ್ಯಾಡಳಿತದ ವಂಚನೆ, ಅವ್ಯವಹಾರಗಳ ತನಿಖೆಯ ಸಲುವಾಗಿ ಯುಡಿಎಫ್ ವತಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸಿರುವ ಸಾರ್ವಜನಿಕ ವಿಚಾರಣೆ ಎಂಬ ಪ್ರತಿಭಟನೆಯ ಭಾಗವಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮ ಮಂಗಳವಾರ ಸಂಜೆ ಕುಂಬಳೆಯಲ್ಲಿ ನಡೆಯಿತು.
ಮಾಜಿ ಸಚಿವ ಹಾಗೂ ಯುಡಿಎಫ್ ಜಿಲ್ಲಾಧ್ಯಕ್ಷ ಸಿ.ಟಿ.ಅಹ್ಮದಲಿ ಉದ್ಘಾಟಿಸಿದರು. ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ನವಕೇರಳ ಸಮಾವೇಶ ಸಂಪೂರ್ಣ ವಿಫಲವಾಗಿದೆ ಎಂದರು. ಆನರ ಹಣವನ್ನು ಬಳಸಿ ಎಡಪಕ್ಷ ದೊಡ್ಡ ವಂಚನೆ ನಡೆಸಿದೆ. ಜನರು ಸಂಕಷ್ಟದಿಂದ ಪರಿತಪಿಸುವಾಗ ಸರ್ಕಾರ ಈ ರೀತಿಯಲ್ಲಿ ಹಣ ವ್ಯಯಗೊಳಿಸುವುದು ಖಂಡನಾರ್ಹ ಎಂದರು.
ಯುಡಿಎಫ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಜೀಜ್ ಮರಿಕೆ ಅಧ್ಯಕ್ಷತೆ ವಹಿಸಿದ್ದರು. ಕೆಪಿ ಸಿಸಿ ಉಪಾಧ್ಯಕ್ಷ ವಿ.ಟಿ.ಬಲರಾಮ್, ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಕೆ.ಎಂ.ಶಾಜಿ ಆಶಯ ಭಾಷಣ ಮಾಡಿದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುಡಿಎಫ್ ಜಿಲ್ಲಾ ಸಂಚಾಲಕ ಗೋವಿಂದನ್ ನಾಯರ್, ಮುಸ್ಲಿಂ ಲೀಗ್ ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಸಿಎಚ್ ಸೆಂಟರ್ ಅಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳ ಗೇಟ್, ಡಿ.ಸಿ.ಸಿ. ಅಧ್ಯಕ್ಷ ಪಿ.ಕೆ.ಫೈಸಲ್, ಡಿಸಿಸಿ ಮಾಜಿ ಅಧ್ಯಕ್ಷ ಹಕೀಂ ಕುನ್ನಿಲ್, ಆರ್.ಎಸ್.ಪಿ. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಬಿ.ನಂಬಿಯಾರ್, ಆರ್.ಎಸ್.ಪಿ. ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಿಜಯನ್ ಕರಿವೆಳ್ಳೂರು, ಜಿಲ್ಲಾ ಯೂತ್ ಲೀಗ್ ಅಧ್ಯಕ್ಷ ಅಜೀಜ್ ಕಳತ್ತೂರು, ಡಿಸಿಸಿ ಕಾರ್ಯದರ್ಶಿ ಸುಂದರ ಆರಿಕ್ಕಾಡಿ, ಮುಸ್ಲಿಂ ಯೂತ್ ಲೀಗ್ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ದಂಡೆಗೋಳಿ, ಯೂತ್ ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಜುನೈದ್ ಉರ್ಮಿ, ಕಾಂಗ್ರೆಸ್ ಕುಂಬಳೆ ಬ್ಲಾಕ್ ಅಧ್ಯಕ್ಷ ಲೋಕನಾಥ ಶೆಟ್ಟಿ, ಕಾಂಗ್ರೆಸ್ ಕುಂಬಳೆ ಮಂಡಲ ಅಧ್ಯಕ್ಷ ರವಿ ಪೂಜಾರಿ, ಯುಡಿಎಫ್ ಮುಖಂಡರಾದ ಎ.ಕೆ. ಆರಿಫ್, ಸೈಫುಲ್ಲಾ ತಂಙಳ್ ಮುಂತಾದ ಮುಖಂಡರು ಉಪಸ್ಥಿತರಿದ್ದರು