ಬದಿಯಡ್ಕ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ನಿರ್ಮಿಸುವ ಅರ್ದುಕ್ಕುಳಿ- ನೆಲ್ಲಿಕ್ಕಟ್ಟೆ- ಪೊಡಿಪ್ಪಳ್ಳ- ಎಡನೀರು ರಸ್ತೆ ಕಾಮಗಾರಿಯನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಶನಿವಾರ ಉದ್ಘಾಟಿಸಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದ ಅಡಿಯಲ್ಲಿ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಐದು ವರ್ಷಗಳ ನಿರ್ವಹಣಾ ಕಾಮಗಾರಿ ಸೇರಿದಂತೆ 4.325 ಕಿ.ಮೀ ಉದ್ದದ ರಸ್ತೆ ನಿರ್ಮಾಣ ವೆಚ್ಚ ರೂ.356.11 ಲಕ್ಷ ಮೀಸಲಿರಿಸಲಾಗಿದೆ.
ನೆಲ್ಲಿಕ್ಕಟ್ಟೆ ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ ಮಿತ್ರ ವರದಿ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಜ್ ಪಾದೂರು, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದ್ರಿಯಾ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಶೈಲಜಾ ಭಟ್, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಸಿ.ವಿ. ಜೇಮ್ಸ್, ಚೆಂಗಳ ಗ್ರಾಮ ಪಂಚಾಯಿತಿ ಸದಸ್ಯರಾದ ಚಿತ್ರಕುಮಾರಿ, ಸಿ.ಕೆ. ಲತೀಫ್, ಸಂಘಟನಾ ಸಮಿತಿ ಉಪಾಧ್ಯಕ್ಷ ಇ. ಅಬೂಬಕರ್ ಮತ್ತು ಕೋಶಾಧಿಕಾರಿ ಕುಂಞ ಕೃಷ್ಣನ್ ಕಾಟುಕೊಚ್ಚಿ ಮಾತನಾಡಿದರು. ಚೆಂಗಳ ಪಂಚಾಯಿತಿ ಸದಸ್ಯೆ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷೆ ಅಂಶಿಫಾ ಅರ್ಷದ್ ಸ್ವಾಗತಿಸಿ, ಸಂಘಟನಾ ಸಮಿತಿ ಸಂಚಾಲಕ ವೇಣುಗೋಪಾಲ್ ವಂದಿಸಿದರು.