ಬದಿಯಡ್ಕ: ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆಯ ಏತಡ್ಕ ನಡುಮನೆ ಪ್ರದೇಶದಲ್ಲಿ ರಸ್ತೆ ಕಾಂಕ್ರೀಟೀಕರಣ ಹಿನ್ನೆಲೆಯಲ್ಲಿ ಡಿಸೆಂಬರ್ 23 ರಿಂದ ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಬದಿಯಡ್ಕದಿಂದ ಸುಳ್ಯಪದವು ತೆರಳುವ ವಾಹನಗಳು ಬದಿಯಡ್ಕ-ಪೆರ್ಲ ರಸ್ತೆಯ ಪಳ್ಳತ್ತಡ್ಕದಿಂದ ಪುತ್ರಕಳ-ಏತಡ್ಕ ಮಾರ್ಗವಾಗಿ ಸುಳ್ಯಪದವಿಗೆ ಹಾಗೂ ಅಲ್ಲಿಂದ ವಾಪಸಾಗುವವರು ಇದೇ ರಸ್ತೆಯನ್ನು ಬಳಸುವಂತೆ ಕಾಸರಗೋಡು ಕೆಆರ್‍ಎಫ್‍ಬಿಪಿಎಂಯು ವಿಭಾಗ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.