ಎರ್ನಾಕುಳಂ: ರಾಜ್ಯದಲ್ಲಿ ಮತ್ತೆ ಕೋವಿಡ್ ಹರಡುತ್ತಿದೆ.ಆದರೆ ಆರೋಗ್ಯ ಇಲಾಖೆಯು ಜನರಿಗೆ ಮಾಹಿತಿ ನೀಡದೆ ಕೋವಿಡ್ ಅಂಕಿಅಂಶಗಳನ್ನು ಮರೆಮಾಚುತ್ತಿದೆ ಎಂದು ಸಂಸದ ಹೈಬಿ ಈಡನ್ ಹೇಳಿದ್ದಾರೆ.
ನವಕೇರಳ ಸಮಾವೇಶ ನಡೆಯುತ್ತಿರುವುದರಿಂದ ಆರೋಗ್ಯ ಇಲಾಖೆ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಸಂಸದರು ಆರೋಪಿಸಿರುವರು. ಜನರ ಆರೋಗ್ಯ ಮತ್ತು ಜೀವಕ್ಕೆ ಅಪಾಯವಾಗಿರುವ ಕೋವಿಡ್ ವಿರುದ್ಧ ಜಾಗರೂಕತೆಯನ್ನು ಬಲಪಡಿಸುವಂತೆ ಅವರು ಕೇಳಿಕೊಂಡರು.
ಪಿಣರಾಯಿ ಸರ್ಕಾರದಂತೆಯೇ ಕೋವಿಡ್ ಕೂಡ ಹಾನಿಕಾರಕ ಎಂದು ಹೈಬಿ ಈಡನ್ ಹೇಳಿದ್ದಾರೆ.ಫೇಸ್ ಬುಕ್ ಮೂಲಕ ಹೈಬಿ ಈಡನ್ ಟೀಕಿಸಿದ್ದಾರೆ.