ಕೋಝಿಕ್ಕೋಡ್: ರಾಜ್ಯಪಾಲರಿಗೆ ಹೆಚ್ಚಿನ ರಕ್ಷಣೆ ಬೇಕಾಗಿಲ್ಲ ಎಂದು ಪೋಲೀಸರು ನೀಡಿದ ಹೇಳಿಕೆ ಬಳಿಕ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಮಿಠಾಯಿ ಸ್ಟ್ರೀಟ್‍ನಲ್ಲಿ(ಕೋಝಿಕ್ಕೋಡ್ ಮಿಠಾಯಿ ತೆರಿವ್)ನಲ್ಲಿ ಮುಕ್ತವಾಗಿ ಸಮಚರಿಸಿ ಅಚ್ಚರಿಮೂಡಿಸಿದರು.
ರಾಜ್ಯಪಾಲರು ಮಿಠಾಯಿ ಪೆಟೆಯಲ್ಲಿ ನಡೆದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪೋಟೋ ತೆಗೆಸಿಕೊಂಡರು. ಬಳಿಕ ಮಿಠಾಯಿ ಬೀದಿಯಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ವ್ಯಾಪಾರಸ್ಥರೊಂದಿಗೆ ಮಾತನಾಡಿದರು. ವ್ಯಾಪಾರಿಗಳು ರಾಜ್ಯಪಾಲರನ್ನು ಜಯ|ಘೋಷದೊಂದಿಗೆ ಸ್ವಾಗತಿಸಿದರು.
ರಾಜ್ಯಪಾಲರು ರಸ್ತೆಯಲ್ಲಿ ತೆರಳುತ್ತಿದ್ದಂತೆ ಅವರ ಜೊತೆ ಪೋಟೋ ತೆಗೆಸಿಕೊಳ್ಳಲು ಸಾಮಾನ್ಯ ಜನರು ಜಮಾಯಿಸಿದರು. ವ್ಯಾಪಾರಿಗಳು ತಮ್ಮ ಸಂಸ್ಥೆಗಳಿಗೆ ಭೇಟಿ ನೀಡಲು ಅವರನ್ನು ಆಹ್ವಾನಿಸಿದರು. ರಾಜ್ಯಪಾಲರು ತಮ್ಮ ಅಂಗಡಿಗಳಿಗೆ ಆಗಮಿಸಿದಾಗ ವ್ಯಾಪಾರಿಗಳು ಹಲ್ವಾ ಮತ್ತು ಟೋಪಿ ನೀಡಿ ಸ್ವಾಗತಿಸಿದರು. ರಾಜ್ಯಪಾಲರ ಜತೆಗೆ ಜನರು ಬೀದಿಗಿಳಿದಿದ್ದರಿಂದ ಅಕ್ಷರಶಃ ಮೆರವಣಿಗೆಯಾಗಿ ಮಾರ್ಪಟ್ಟಿತು.
ಅವರನ್ನು ಬೀದಿಗಿಳಿಸಿ ಎಂಬ ಎಸ್‍ಎಫ್‍ಐ ಸವಾಲಿಗೆ ಪ್ರತಿಯಾಗಿ ರಾಜ್ಯಪಾಲರು ಜನರ ಮಧ್ಯೆ ತೆರಳಿ ಪೋಲೀಸ್ ಭದ್ರತೆ ಬೇಡ ಎಂದು ಸೂಚಿಸಿದರು. ತನ್ನನ್ನು ತಡೆಯುವವರು ತಡೆಯಲಿ, ಹೆದರುವುದಿಲ್ಲ ಎಂದು ಇಂದು ಮಾಧ್ಯಮಗಳಿಗೆ ತಿಳಿಸಿದರು. ಕೇರಳದಲ್ಲಿ ಪೆÇಲೀಸ್ ಪಡೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಖ್ಯಮಂತ್ರಿ ಬಿಡುತ್ತಿಲ್ಲ. ಹಾಗಾಗಿ ಆತನಿಗೆ ಭದ್ರತೆ ಬೇಕಿಲ್ಲ. ಈ ಕುರಿತು ಪೋಲೀಸ್ ವರಿಷ್ಠರಿಗೆ ಪತ್ರ ಬರೆಯಲಾಗಿದೆ ಎಂದು ಅವರು ಇಂದು ಮಾಧ್ಯಮಗಳಿಗೆ ತಿಳಿಸಿದರು.