ಕಾಸರಗೋಡು: ಏಷ್ಯಾಖಂಡದಲ್ಲೇ ಅತಿದೊಡ್ಡ ಶಾಲಾಕಲೋತ್ಸವ ಎಂಬ ಖ್ಯಾತಿ ಪಡೆದಿರುವ ಕೇರಳ ಶಾಲಾ ಕಲೋತ್ಸವದ ಕಾಸರಗೋಡು ಜಿಲ್ಲಾಮಟ್ಟದ ಕಲೋತ್ಸವ ಡಿ. 5ರಿಂದ 9ರ ವರೆಗೆ ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿರುವುದು. 5ರಂದು ಬೆಳಗ್ಗೆ 9ಕ್ಕೆ ಜಿಲ್ಲಾ ಶಿಕ್ಷಣ ಉಪ ನಿದೇಸಕ ಕೆ. ನಂದಿಕೇಶನ್ ಧ್ವಜಾರೋಹಣ ನಡೆಸುವ ಮೂಲಕ ಐದು ದಿವಸಗಳ ಕಲೋತ್ಸವಕ್ಕೆ ಚಾಲನೆ ನೀಡುವರು ಎಂದು ಜಿಪಂ ಅಧ್ಯಕ್ಷೆ ಬೇಬಿ ಬಾಲಕ್ರಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿ. 6ರ ವರೆಗೆ ಏಳು ವದಿಕೆಗಳಲ್ಲಾಗಿ ವೇದಿಕೇತರ ಸ್ಪರ್ಧೆಗಳು ನಡೆಯುವುದು. 7ರಂದು ಸಂಜೆ 4ಕ್ಕೆ ಕೇರಳ ವಿಧಾನ ಸಭಾ ಸ್ಪೀಕರ್ ಎ.ಎನ್ ಶಂಸೀರ್ ಕಲೋತ್ಸವ ಉದ್ಘಾಟಿಸುವರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲೆಯ ಶಾಸಕರು, ಸ್ಥಳೀಯಾಡಳಿತ ಜನಪ್ರತಿನಿಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸುವರು.
ಒಟ್ಟು 305 ವಿಭಾಗಗಳಲ್ಲಾಗಿ ಯುವ ಪ್ರತಿಭೆಗಳಿಂದ ಪ್ರದರ್ಶನ ನಡೆಯಲಿದೆ. ಇದರಲ್ಲಿ ರಾಜ್ಯದ ಕೈಪಿಡಿಯಲ್ಲಿ ಸೇರಿಸದ ಎಂಟು ಕನ್ನಡ ವಿಭಾಗಗಳು ಒಳಗೊಂಡಿದೆ. ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಎಚ್‍ಎಸ್‍ಎಸ್ ವಿಭಾಗದಲ್ಲಿ 4112 ಪ್ರತಿಭೆಗಳು ಸ್ಪರ್ಧಿಸಲಿದ್ದಾರೆ.
ಸ್ಪರ್ಧೆಯು ಒಟ್ಟು 83 ವೇದಿಕೇತರ ಮತ್ತು 222 ವೇದಿಕೆ ಸ್ಪರ್ಧೆಗಳು ಒಳಗೊಂಡಿದೆ. ಉಪಜಿಲ್ಲೆಯಿಂದ 92 ಅಪೀಲು ಲಭಿಸಿದ್ದು, ಅನುಮೋದನೆ ಪಡೆದ ಎಲ್ಲ 301 ಮಕ್ಕಳು ಸ್ಪರ್ಧಿಸಲಿದ್ದಾರೆ.
ಕಾಸರಗೋಡು ನಗರದಿಂದ 22 ಕಿ.ಮೀ ದೂರದಲ್ಲಿರುವ ಕಾರಡ್ಕದಲ್ಲಿ ಜಿಲ್ಲಾ ಶಾಲಾ ಕಲೋತ್ಸವ ನಡೆಯಿದ್ದು, ಚೆರ್ಕಳ-ಜಾಲ್ಸೂರು ರಸ್ತೆ ಅಥವಾ ಚೆರ್ಕಳ-ಎಡನೀರು-ಪೈಕ-ಮುಳ್ಳೇರಿಯಾ ರಸ್ತೆಯಾಗಿಯೂ ಶಾಲೆಗೆ ತಲುಪಬಹುದು. ಶಾಲಾ ಕಲೋತ್ಸವ ಪ್ರಚಾರಾತ್ ಸೋಮವಾರ ಸಂಜೆ ಮುಳ್ಳೇರಿಯಾ ಪೇಟೆಯಲ್ಲಿ ಡಂಗುರ ಯಾಥ್ರೆ ಜರುಗಿತು.
ಜಿಲ್ಲಾ ಶಾಲಾ ಕಲಾ ಉತ್ಸವದಲ್ಲಿ ಅತ್ಯುತ್ತಮ ಆನ್‍ಲೈನ್ ಮತ್ತು ಮುದ್ರಣ ವರದಿ ಮಾಧ್ಯಮಕ್ಕಾಗಿ ಸ್ಪರ್ಧೆಯನ್ನು ಆಯೋಜಿಸುವುದು. ಅತ್ಯುತ್ತಮ ವರದಿಗಾಗಿ ಪ್ರಶಸ್ತಿ ನೀಡಲಾಗುವುದು. ಕಲೋತ್ಸವ ದಿನಗಳ ಸುದ್ದಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎನ್ ಎ ನೆಲ್ಲಿಕುನ್ನು, ಕಾರಡ್ಕ ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಜಿಲ್ಲಾ ಶಿಕ್ಷಣ ಉಪನಿರ್ದೇಸಕ ಎನ್ ನಂದಿಕೇಶನ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ ಸುರೇಶ್ ಕುಮಾರ್, ಮಾಧ್ಯಮ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ವಿನೋದ್ ಪಾಯಂ ಸಂಚಾಲಕ ಕೆ ಶಿಹಾಬುದ್ದೀನ್ ಉಪಸ್ಥಿತರಿದ್ದರು.