ಕಾಸರಗೋಡು: ಸ್ಟೂಡೆಂಟ್ ಪೆÇಲೀಸ್ ಕೆಡೆಟ್(ಎಸ್‍ಪಿಸಿ) ಜಿಲ್ಲಾ ಕಛೇರಿಯ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಹವಾಸ ಶಿಬಿರ ಡಿ.26 ರಿಂದ 30 ರವರೆಗೆ ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿರುವುದು. ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತಸಮಿತಿ ರಚನಾಸಭೆ ಜಿಎಚ್‍ಎಸ್‍ಎಸ್ ಉದಿನೂರಿನಲ್ಲಿ ನಡೆಯಿತು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ಸಮಾರಂಭ ಉದ್ಘಾಟಿಸಿದರು. ಪಡನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ವಿ. ಮುಹಮ್ಮದ್ ಅಸ್ಲಂ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಸದಸ್ಯ ಸಿ.ಜೆ.ಸಜಿತ್ ಮುಖ್ಯ ಅತಿಥಿಯಾಗಿದ್ದರು. ಕಾಞಂಗಾಡ್ ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್, ನೀಲೇಶ್ವರಂ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸುಮೇಶ್, ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ವಿ. ಅನಿಲಕುಮಾರ್, ತ್ರಿಕರಿಪುರ ಕರಾವಳಿ ಪೆÇಲೀಸ್ ಠಾಣೆ ಇನ್ಸ್ ಪೆಕ್ಟರ್ ಎ.ಅನಿಲಕುಮಾರ್, ಅಬಕಾರಿ ಸರ್ಕಲ್ ಇನ್ಸ್ ಪೆಕ್ಟರ್ ಎಂ.ದಿಲೀಪ್, ಕಾಸರಗೋಡು ವಲಯ ಅರಣ್ಯಾಧಿಕಾರಿ ಎನ್.ವಿ.ಸತ್ಯನ್, ತ್ರಿಕರಿಪುರ ಅಗ್ನಿಶಾಮಕ ಮತ್ತು ರಕ್ಷಣಾ ವಿಭಾಗದ ಎಸ್‍ಎಫ್‍ಆರ್‍ಒ ಗಣೇಶನ್, ಪಿ.ಟಿ.ಎ ಅಧ್ಯಕ್ಷ ವಿ.ವಿ.ಸುರೇಶನ್, ಶಾಲಾ ಪ್ರಾಂಶುಪಾಲೆ ಪಿ.ವಿ.ಲೀನಾ, ಮುಖ್ಯಶಿಕ್ಷಕಿ ಕೆ.ಸುಬೈದಾ, ಕೇಂದ್ರೀಯ ಎಯುಪಿಎಸ್ ಮುಖ್ಯೋಪಾಧ್ಯಾಯ ವಿ.ವೇಣುಗೋಪಾಲನ್, ಚಂದೇರ ಪೊಲೀಸ್ ಠಾಣೆ ಹೆಚ್ಚುವರಿ ಎಸ್‍ಐ ಸಿ.ಪ್ರದೀಪ್ ಕುಮಾರ್, ಕೆ.ಪಿ.ರಾಜೀವನ್, ಶಾಲೆ ಎಸ್‍ಎಂಸಿ ಅಧ್ಯಕ್ಷ ಪಿ.ನರೇಂದ್ರನ್, ಎಸ್‍ಪಿಸಿ ಯೋಜನೆಯ ಜಿಲ್ಲಾ ಸಂಚಾಲಕ ಕೆ.ಅಶೋಕನ್, ಕೆ.ಟಿ. ರಾಜೇಶ್ ಉಪಸ್ಥಿತರಿದ್ದರು. ಎಸ್‍ಪಿಸಿ ಜಿಲ್ಲಾ ಸಹಾಯಕ ನೋಡಲ್ ಅಧಿಕಾರಿ ಟಿ. ತಂಬಾನ್ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಕೆ.ವಿ.ಸತ್ಯನ್ ವಂದಿಸಿದರು.