ಇಡುಕ್ಕಿ: ರಾಜ್ಯಪಾಲರ ಮೇಲೆ ಯೋಜಿತ ದಾಳಿ ನಡೆಸಿದ ಎಸ್.ಎಫ್.ಐ. ಕಾರ್ಯಕರ್ತರನ್ನು ಸಚಿವರುಗಳಾದ ಮೊಹಮ್ಮದ್ ರಿಯಾಜ್, ಪಿ.ರಾಜೀವ್, ಎಕೆ ಶಶೀಂದ್ರನ್ ಮತ್ತು ಇತರರು ಸಮರ್ಥಿಸಿ ಶಹಬಾಸ್ ನೀಡಿದ್ದಾರೆ.
ಮುಹಮ್ಮದ್ ರಿಯಾಝ್ ಮಾತನಾಡಿ, ಪ್ರತಿಭಟನೆ ನಡೆಸಿದ ಎಸ್ಎಫ್ಐಗೆ ಶೇಕ್ ಹ್ಯಾಂಡ್ ನೀಡಬೇಕು ಎಂದಿರುವರು. ರಾಜ್ಯಪಾಲರು ಕಾರಿನಿಂದ ಇಳಿದದ್ದೇಕೆ? ಎಂದು ರಾಜೀವ್ ಪ್ರಶ್ನಿಸಿದ್ದಾರೆ. ಎಸ್‍ಎಫ್‍ಐ ಕಾರ್ಯಕರ್ತರು ಪ್ರತಿಭಟನೆಗೆ ಬಂದಾಗ ರಾಜ್ಯಪಾಲರು ತಮ್ಮ ವಾಹನದಲ್ಲಿ ತೆರಳಿದ್ದನ್ನು ಸಚಿವ ಪಿ.ರಾಜೀವ್ ಟೀಕಿಸಿದರು.
ರಾಜ್ಯಪಾಲರು ಹೀರೋ ಆಗಲು ಯತ್ನಿಸುತ್ತಿದ್ದಾರೆ ಎಂದು ಸಚಿವ ಎ.ಕೆ.ಸಶೀಂದ್ರನ್ ಟೀಕಿಸಿದರು. ಕಪ್ಪು ಬಾವುಟ ತೋರಿಸಿದಾಗ ಕಾರಿನಿಂದ ಇಳಿದು ಗೂಂಡಾಗಳಂತೆ ವರ್ತಿಸಿದ್ದಾರೆ. ಪೋಲೀಸರು ಏನು ಮಾಡುತ್ತಿದ್ದಾರೆಂದು ನೋಡಬೇಕು. ರಕ್ಷಣೆಗೆ ಪೆÇಲೀಸರು ಇದ್ದಾರೆ. ಅವರ ಕಡೆಯಿಂದ ವೈಫಲ್ಯವಿದ್ದರೆ, ಸರ್ಕಾರವನ್ನು ದೂಷಿಸಬಹುದು. ಇದನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಲು ಮಾಡಲಾಗಿದೆ. ಕೇರಳದ ರಾಜ್ಯಪಾಲರು ಮತ್ತು ಪ್ರತಿಪಕ್ಷಗಳು ಉದ್ದೇಶಪೂರ್ವಕವಾಗಿ ರಾಜ್ಯದಲ್ಲಿ ಶಾಂತಿಯುತ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ ಎಂದು ಸಚಿವರು ಹೇಳಿದರು.