ಕಾಸರಗೋಡು: ಪಳ್ಳಿಕೆರೆ ಗ್ರಾಮ ಪಂಚಾಯಿತಿಯ 22ನೇ ವಾರ್ಡ್ ನಲ್ಲಿ ವಾಹನದಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ನಿಷೇಧಿತ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಜಿಲ್ಲಾ ಜಾರಿ ದಳ ವಶಪಡಿಸಿಕೊಂಡಿದೆ.
275 ಎಂಎಲ್‍ನ ತಲಾ 30 ಬಾಟಲ್‍ಗಳಿದ್ದ 650 ಪೆಟ್ಟಿಗೆ ವಶಪಡಿಸಿಕೊಳ್ಳಲಾಗಿದೆ. ಬಾಟಲಿ ನೀರು ಸಾಗಿಸುತ್ತಿದ್ದ ವಾಹನಕ್ಕೆ 25000ರೂ. ದಂಡ ವಿಧಿಸಲಾಗಿದ್ದು, ಕ್ರಮ ಕೈಗೊಳ್ಳುವಂತೆ ಪಳ್ಳಿಕ್ಕರ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿದರು. ಜಿಲ್ಲಾ ಜಾರಿ ದಳದ ಅಧಿಕಾರಿ ಪಿ.ವಿ.ಶಾಜಿ, ಜಾರಿ ಅಧಿಕಾರಿ ಎಂ.ಟಿ.ಪಿ.ರಿಯಾಜ್, ಜಾರಿ ದಳದ ಸದಸ್ಯ ಇ.ಕೆ.ಫಾಸಿಲ್, ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಕೆ.ಎಚ್.ಅನೀಶ್ ಕುಮಾರ್, ಜೂನಿಯರ್ ಅಧೀಕ್ಷಕ ಎಸ್.ಅಬ್ದುಲ್ ಶುಕೂರ್ ತಪಾಸಣೆಯಲ್ಲಿ ಸಹಕರಿಸಿದರು.