ಎರ್ನಾಕುಳಂ: ನಟಿಯ ಮೇಲಿನ ಹಲ್ಲೆ ಪ್ರಕರಣದ ಮೆಮೊರಿ ಕಾರ್ಡ್ ಸೋರಿಕೆ ಕುರಿತು ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. ಘಟನೆಯ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಸತ್ರ ನ್ಯಾಯಾಧೀಶರಿಗೆ ನ್ಯಾಯಾಲಯ ಸೂಚಿಸಿದೆ.
ವಾಸ್ತವಿಕ ವಿಚಾರಣೆ ನಡೆಸಿ, ಅಗತ್ಯ ಬಿದ್ದರೆ ಪೋಲೀಸ್ ಅಥವಾ ಇತರೆ ಏಜೆನ್ಸಿಗಳ ನೆರವು ಪಡೆಯುವಂತೆ ಕೋರ್ಟ್ ಸೂಚಿಸಿದೆ.
ಒಂದು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕು ಮತ್ತು ದೂರು ಇದ್ದಲ್ಲಿ ಸಂತ್ರಸ್ಥೆ ಮತ್ತೊಮ್ಮೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ವಿಚಾರಣಾ ನ್ಯಾಯಾಲಯದ ಕಸ್ಟಡಿಯಲ್ಲಿದ್ದಾಗ ಮೆಮೊರಿ ಕಾರ್ಡ್‍ನಲ್ಲಿರುವ ಮಾಹಿತಿ ಸೋರಿಕೆಯಾಗಿದೆ ಎಂದು ಆರೋಪಿಸಿ ಸಂತ್ರಸ್ಥೆ ತನಿಖೆ ಕೋರಿ ಹೈಕೋರ್ಟ್‍ಗೆ ಮೊರೆ ಹೋಗಿದ್ದರು. ಅನುಮತಿ ಪಡೆಯದೇ ಮೆಮೊರಿ ಕಾರ್ಡ್ ಪರಿಶೀಲಿಸಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಬೇಕು ಎಂಬುದು ಮನವಿಯಲ್ಲಿ ಪ್ರಮುಖ ಬೇಡಿಕೆಯಾಗಿತ್ತು.