ಕಾಸರಗೋಡು: ಕೂಡ್ಲು ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಜರಗುವ ಧನುಮಾಸದ ಧನು ಪೂಜೆಯ ಅಂಗವಾಗಿ ತಿರುವಾದಿರ ಕಾರ್ಯಕ್ರಮ ಬುಧವಾರ ಜರಗಿತು. ಧನು ಪೂಜಾ ಸಮಿತಿ ಅಧ್ಯಕ್ಷ, ಉದ್ಯಮಿ ದಿನೇಶ್ ಎಂ ಸಮಾರಂಭ ಉದ್ಘಾಟಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಮನ್ನಿಪಾಡಿ, ಕಾರ್ಯದರ್ಶಿ ಉದಯಕುಮಾರ್ ಮನ್ನಿ ಪಾಡಿ, ಶ್ರೀಶೈಲ ಮಹಾದೇವ ಸೇವಾ ಟ್ರಸ್ಟ್ ನ ಅಧ್ಯಕ್ಷ ಸುಭಾಷ್ ಪಾಟಾಲಿ, ಪ್ರಧಾನ ಕಾರ್ಯದರ್ಶಿ ದಾಮೋದರ ನಾಯಕ್, ವೆಂಕಟರಮಣ ಹೊಳ್ಳ, ಮಹಾಬಲ ರೈ, ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀರಾಮ್ ಕುಮಟಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು.