ಬದಿಯಡ್ಕ: ಮಂಗಳೂರಿನಲ್ಲಿ ನಡೆದ ಜಾನಪದ ಸ್ಪರ್ಧಾಕೂಟದಲ್ಲಿ ತುಳುನಾಡಿನ ಭೂಮಿಪುತ್ರರಾದ ಮೊಗೇರರ ದುಡಿ ಕುಣಿತ ಮತ್ತು ದೂಪಬಲಿ ಪ್ರಸ್ತುತಪಡಿಸಿದ ಕನ್ನೆಪ್ಪಾಡಿ ಜಾನಪದ ಕಲಾಸಂಘಕ್ಕೆ ದ್ವಿತೀಯ ಸ್ಥಾನ ಲಭಿಸಿದೆ.
ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಜಾನಪದ ಕಡಲೋತ್ಸವ, ಜಾನಪದ ಕಲಾಪ್ರದರ್ಶನ, ಆಹಾರ ಮೇಳದಂಗವಾಗಿ ಸ್ಪಧೆರ್Éಯನ್ನು ಏರ್ಪಡಿಸಲಾಗಿತ್ತು. ಮಂಗಳೂರು ಪುರಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು ಇಪ್ಪತ್ತು ತಂಡಗಳು ಭಾಗವಹಿಸಿದ್ದವು. ಜಾನಪದ ಕಲಾವಿದ ಹಾಗೂ ಕವಿ ಶಂಕರ ಸ್ವಾಮಿಕೃಪಾ ನೇತೃತ್ವದ ಬೊಳಿಕೆ ಜಾನಪದ ಕಲಾಸಂಘದಲ್ಲಿ ಬಾಬು ಶೇಂತಾರು, ಯಶೋದಾ ಸ್ವಾಮಿಕೃಪಾ, ಹರೀಶ್ ಎಂ.ಕೆ., ಸುನಿಲ್ ಕುಮಾರ್ ಮುಣ್ಚಿಕ್ಕಾನ, ರಾಕೇಶ್ ಮುಣ್ಚಿಕ್ಕಾನ, ಯಜ್ಞುಷಾ ಸ್ವಾಮಿಕೃಪಾ, ಶಂಕರ ಕೊಲ್ಲಂಗಾನ, ಶ್ರಮಿತ್ ಶೇಂತಾರು, ಡಿಕಿಶ್ ರಾಜ್ ಸ್ವಾಮಿಕೃಪಾ ಪ್ರದರ್ಶನ ಪ್ರಸ್ತುತಿ ನಡೆಸಿದ್ದರು.