ಉಪ್ಪಳ: ಬೆನಕ ಯಕ್ಷಕಲಾ ವೇದಿಕೆ ಪೈವಳಿಕೆ ಇದರ ನೇತೃತ್ವದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಠಾನ ಉಜಿರೆ ಸಹಯೋಗದೊಂದಿಗೆ ರಜತಪರ್ವ ಸರಣಿ ತಾಳಮದ್ದಳೆಯ ಭಾಗವಾಗಿ ಖ್ಯಾತ ಯಕ್ಷಗಾನ ಪ್ರಸಾದನ ಕಲಾವಿದ, ವೇಶಧಾರಿ ದಿ.ದೇವಕಾನ ಕೃಷ್ಣ ಭಟ್ ಸಂಸ್ಮರಣಾ ಕಾರ್ಯಕ್ರಮ ಇಂದು(ಸೋಮವಾರ) ಅಪರಾಹ್ನ 4 ರಿಂದ 7 ರವರೆಗೆ ಪೈವಳಿಕೆ ಸಮೀಪದ ಬಾಯಿಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಪರಿಸರದಲ್ಲಿ ನಡೆಯಲಿದೆ.
ಈ ಸಂದರ್ಭ ಮೋಕ್ಷ ಸಂಗ್ರಾಮ ಆಖ್ಯಾಯಿಕೆಯ ತಾಳಮದ್ದಳೆ ಪ್ರಸ್ತುತಿಗೊಳ್ಳಲಿದ್ದು, ಹಿಮ್ಮೇಳದಲ್ಲಿ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ನಿಡುವಜೆ ಶಂಕರ ಭಟ್, ರಾಮಮೂರ್ತಿ ಕುದ್ರೆಕೋಡ್ಳು ಪ್ರಸಂಗ ನಿರ್ವಹಿಸುವರು. ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಉಜಿರೆ ಅಶೋಕ ಭಟ್, ಶ್ರೀಕೃಷ್ಣ ದೇವಕಾನ ಪಾತ್ರನಿರ್ವಹಣೆ ಮಾಡುವರು.