ಕಾಸರಗೋಡು: ಕೇಳುಗುಡ್ಡೆ ಅಯ್ಯಪ್ಪನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರದಲ್ಲಿ ವಾರ್ಷಿಕ ಮಹೋತ್ಸವ ಡಿ. 28ರಿಂದ 30ರ ವರೆಗೆ ಜರುಗಲಿದೆ. ಕಾರ್ಯಖ್ರಮದ ಪೂರ್ವಭಾವಿಯಾಗಿ ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಾಲಯದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಮಂದಿರಕ್ಕೆ ತಲುಪಿತು. ನಂತರ ಉಗ್ರಾಣ ಮುಹೂರ್ತ ನೆರವೇರಿತು.
28ರಂದು ಬೆಳಗ್ಗೆ 8ಕ್ಕೆ ಗಣಪತಿ ಹೋಮ, ಶುದ್ಧಿ ಕಲಶ, ಸಂಜೆ 4ಕ್ಕೆ ಧಾರ್ಮಿಕ ಸಭೆ ನಡೆಯುವುದು. ಹಿಂದೂ ಐಕ್ಯವೇದಿ ಅಧ್ಯಕ್ಷ ವಲ್ಸನ್ ತಿಲ್ಲಂಗೇರಿ ಧಾರ್ಮಿಕ ಭಾಷಣ ಮಾಡುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡುವರು. ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯುವುದು. 29ರಂದು ಬೆಳಗ್ಗೆ 8ಕ್ಕೆ ಶ್ರೀಶಾಸ್ತಾ ಅಷ್ಟೋತ್ತರ ಶತನಾಮಾವಳಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗತಂಬಿಲ, ಆಶ್ಲೇಷಬಲಿ, ಮಧ್ಯಾಹ್ನ 1.30ರಿಂದ ಯಕ್ಷಗಾನ ಬಯಲಾಟ, ಸಂಜೆ 7ಕ್ಕೆ ದೀಪ ಪ್ರತಿಷ್ಟೆ, ಭಜನೆ, ರತ್ರಿ 8ಕ್ಕೆ ಸಹಸ್ರ ದೀಪೋತ್ಸವ, 9ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯುವುದು. 30ರಂದು ಬೆಳಗ್ಗೆ 9ಕ್ಕೆ ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ಮಧ್ಯಾಹ್ನ 1.30ಕ್ಕೆ ವಿಠಲ ಶೆಟ್ಟಿ ಕೂಡ್ಲು ಮತ್ತು ಬಳಗದವರಿಂದ ಭಕ್ತಿಗಾನ ಸುಧಾ, ಸಂಜೆ 6.10ಕ್ಕೆ ದೀಪ ಪ್ರತಿಷ್ಠೆ, ಭಜನೆ, ಶೋಭಾಯಾತ್ರೆ, ವಿಶೇಷ ಸುಡುಮದ್ದು ಪ್ರದರ್ಶನಮರುದಿನ ಸೂರ್ಯೋದಯಕ್ಕೆ ದೀಪ ವಿಸರ್ಜನೆ ನಡೆಯುವುದು.