ಡಿಸೆಂಬರ್, ಜನವರಿ ತಿಂಗಳು ಆರಂಭವಾಯಿತು ಅಂದ್ರೆ ಸಾಕಷ್ಟು ಜನರಿಗೆ ಬೇಸರವೇ ಆಗುತ್ತೆ ಎನ್ನಬಹುದು. ಯಾಕೆಂದರೆ ಇದು ಕಟ ಕತ ನಡುಗುವ ಚಳಿಗಾಲದ ಸಮಯ. ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಚಳಿಗಾಲದಲ್ಲಿ ಸಾಕಷ್ಟು ಜನರಿಗೆ ಶ್ವಾಸಕೋಶದ ಸಮಸ್ಯೆ ಕಾಡುತ್ತದೆ ಅಷ್ಟೇ ಅಲ್ಲದೆ ಚರ್ಮದಲ್ಲಿ ಬಿರುಕು ಉಂಟಾಗಿ ಸಮಸ್ಯೆ ಉಂಟಾಗುತ್ತದೆ. ನಾವು ಈ ಲೇಖನದಲ್ಲಿ ಶ್ವಾಸಕೋಶದ ಆರೋಗ್ಯಕ್ಕೆ ಮಾಡಬೇಕಾಗಿರುವ ಪ್ರಮುಖ ಕೆಲಸದ ಬಗ್ಗೆ ತಿಳಿಸಿಕೊಡುತ್ತೇವೆ!
ಚಳಿಗಾಲದಲ್ಲಿ ಶ್ವಾಸಕೋಶದ ಆರೋಗ್ಯ ಕಾಪಾಡುವುದು ಮುಖ್ಯ!
ಉಸಿರಾಟದ ಸಮಸ್ಯೆಗೆ ಮುಖ್ಯವಾದ ಕಾರಣವೇ ವಾಯುಮಾಲಿನ್ಯ. ಇದರ ಜೊತೆಗೆ ಚಳಿಗಾಲದಲ್ಲಿ ನಮ್ಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ನಾವು ಉಸಿರಾಡಿಸುವ ಗಾಳಿ ಉತ್ತಮ ಗುಣಮಟ್ಟದಾಗಿದ್ದರೆ ಒಳ್ಳೆಯ ಆರೋಗ್ಯ ನಮ್ಮದಾಗುತ್ತದೆ ಆದರೆ ನಾವು ವಯಸ್ಸಾಗುತ್ತಾ ಬಂದಂತೆ ವಾಯುಮಾಲಿನ್ಯದ ಹೆಚ್ಚಳದ ಕಾರಣದಿಂದಾಗಿ ಶ್ವಾಸಕೋಶದಲ್ಲಿ ಸಮಸ್ಯೆಗಳು ಕಾಡಲು ಶುರುವಾಗುತ್ತೆ. ಎಷ್ಟರಮಟ್ಟಿಗೆ ಅಂದರೆ ಉಸಿರಾಡಿಸಲು ಕೂಡ ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಇದಕ್ಕೆ ಕೃತಕ ಉಸಿರಾಟದ ಉಪಕರಣಗಳನ್ನು ಬಳಸಿ ಉಸಿರಾಡುವಂತಹ ಪರಿಸ್ಥಿತಿ ಕೂಡ ಎದುರಾಗಬಹುದು.
ವಾಯುಮಾಲಿನ್ಯದ ಸಮಯದಲ್ಲಿ ಉಸಿರಾಟದ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ ಇದು ಹೃದಯ ರಕ್ತನಾಳದ ಕಾಯಿಲೆಗಳನ್ನು ಹೆಚ್ಚು ಮಾಡುತ್ತದೆ. ರಕ್ತದೊತ್ತಡ ಅಧಿಕವಾಗುತ್ತದೆ. ದುರ್ಬಲ ಉಸಿರಾಟದ ಕ್ರಿಯೆಯಿಂದಾಗಿ ದೇಹದ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ವಾಸ್ತವವಾಗಿ ನಾವು ಉಸಿರಾಡಿಸುವ ಗಾಳಿ, ನಾವು ಜೀವಿಸುವ ಜೀವನ ಶೈಲಿ ಪ್ರತಿಯೊಂದು ಕೂಡ ನಮ್ಮ ಉಸಿರಾಟದ ಮೇಲೆ ಬಹಳ ಬೇಗ ಪರಿಣಾಮ ಬೀರುತ್ತದೆ ಎನ್ನಬಹುದು.
ಹಾಗಾದ್ರೆ ಈ ಉಸಿರಾಟದ ಸಮಸ್ಯೆಯನ್ನ ತಡೆಗಟ್ಟಲು ಏನು ಮಾಡಬೇಕು ಅದರಲ್ಲೂ ಚಳಿಗಾಲದಲ್ಲಿ ಯಾವ ರೀತಿಯ ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಶದಲ್ಲಿ 2019ರ ಅಂಕಿ ಅಂಶಗಳ ಪ್ರಕಾರ 16.7 ಲಕ್ಷ ಜನ ಕಲುಷಿತ ಗಾಳಿಯಿಂದಾಗಿಯೇ ಬಲಿಯಾಗಿದ್ದಾರೆ ಹಾಗಾಗಿ ಹೃದಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಜೀವನದಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಡುಗಳನ್ನ ತಕ್ಷಣವೇ ಮಾಡಿಕೊಳ್ಳಿ ಇಲ್ಲವಾದರೆ ಶ್ವಾಸಕೋಶದ ಸಮಸ್ಯೆ ಅತಿಯಾಗಿ ಕಾಡಬಹುದು.
ನಿರಂತರ ಮಾನಿಟರಿಂಗ್ ಮಾಡಿ!
ಹಿರಿಯ ವಯಸ್ಸಿನಲ್ಲಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ ಇಂತಹ ಸಂದರ್ಭದಲ್ಲಿ ಗಾಳಿಯ ಗುಣಮಟ್ಟದ ಮೇಲ್ವಿಚಾರಣಾ ಸಾಧನವನ್ನು ಇಟ್ಟುಕೊಳ್ಳಬೇಕು ಇದರಿಂದಾಗಿ ಯಾವ ರೀತಿಯ ಹಾಗೂ ಎಷ್ಟು ಶುದ್ಧವಾಗಿರುವ ಗಾಳಿಯನ್ನು ಸೇವಿಸುತ್ತೇವೆ ಎಂಬುದನ್ನು ತಿಳಿದುಕೊಳ್ಳಬಹುದು ನೈಜ ಸಮಯದ ಡಾಟಾ ಒದಗಿಸುವ ಈ ಸಾಧನಗಳು ವೈದ್ಯರಿಗೆ ನಿಮ್ಮ ಆರೋಗ್ಯ ಟ್ರ್ಯಾಕ್ ಮಾಡಲು ಕೂಡ ಸಹಾಯ ಮಾಡುತ್ತವೆ.
ವಾತಾವರಣ ಶುದ್ಧವಾಗಿರಬೇಕು!
ಹೊರಗಡೆ ಇರುವ ಪ್ರದೂಷಣೆ ಅಥವಾ ವಾಯುಮಾಲಿನ್ಯವನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ ಆದರೆ ಮನೆಯ ಒಳಗಡೆ ಇರುವಂತಹ ವಾತಾವರಣವನ್ನು ನಾವು ನಿಯಂತ್ರಿಸಬಹುದು ಹಾಗಾಗಿ ಮನೆಯ ಒಳಭಾಗದಲ್ಲಿ ಶುದ್ಧವಾಗಿರುವಂತಹ ಗಾಳಿ ಪ್ರವಹಿಸುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನೀವು ಏರ್ ಪ್ಯೂರಿಫೈಯರ್ ಕೂಡ ಬಳಸಬಹುದು. ಹಿರಿಯರಿಗೆ ಉಂಟಾಗುವ ಶೇಕಡ 30% ನಷ್ಟು ಉಸಿರಾಟದ ಸಮಸ್ಯೆಯನ್ನು ಕಡಿತಗೊಳಿಸಬಹುದು.
ಕಾರ್ಯ ಚಟುವಟಿಕೆಯ ವೇಳಾಪಟ್ಟಿ ರಚಿಸಿ!
ಮುಂಜಾನೆ ಹೊರಗಡೆ ಹೋಗುವುದಕ್ಕೆ ಸ್ವಲ್ಪ ಕಷ್ಟವಾಗಬಹುದು. ಮುಂಜಾನೆ ವಾಕ್ ಅದೇ ರೀತಿ ತಡರಾತ್ರಿ ವಾಕ್ ಮಾಡುವುದು ಕೂಡ ಈ ಸಮಯದಲ್ಲಿ ಒಳ್ಳೆಯದಲ್ಲ ಹಾಗಾಗಿ ಸ್ವಲ್ಪ ಸೂರ್ಯನ ಕಿರಣಗಳು ಬೀಳುವ ಸಂದರ್ಭದಲ್ಲಿ ವಾಕಿಂಗ್ ಹೋಗುವುದು ಒಳ್ಳೆಯದು. ನೀವು ನಿಮ್ಮ ಕೆಲಸಕ್ಕಾಗಿ ಹೊರಗಡೆ ಹೋಗುವುದಾದರೆ ಅಥವಾ ಬೆಳಗಿನ ಜಾಗಿಂಗ್ ಹಾಗೂ ವಾಕಿಂಗ್ ಗಾಗಿ ಹೊರಗಡೆ ಹೋಗುವುದಾದರೆ ಒಂದು ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಿ ಅತಿಯಾದ ವಾಯುಮಾಲಿನ್ಯ ಹೊರಗಡೆ ಕಾಣಿಸಿಕೊಳ್ಳುವಂತಹ ಸಂದರ್ಭದಲ್ಲಿ ಹೆಚ್ಚಾಗಿ ಓಡಾಡಬಾರದು ಅದರಲ್ಲೂ ಉಸಿರಾಟದ ಸಮಸ್ಯೆ ಇರುವವರು ಅಪಾಯಕಾರಿ ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದು ಒಳ್ಳೆಯದಲ್ಲ.
ಮಾಸ್ಕ್ ಬಳಸುವುದು ಒಳ್ಳೆಯದು!
ಮಾಲಿನ್ಯ ಹೆಚ್ಚಾಗಿ ಉಂಟಾದಾಗ ಅದರಲ್ಲೂ ಚಳಿಗಾಲದಲ್ಲಿ ಮಾಲಿನ್ಯ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಇಂತಹ ಸಂದರ್ಭದಲ್ಲಿ ನೀವು ಹೊರಗಡೆ ಹೋಗುವುದಾದರೆ ವಾಯು ಮಾಲಿನ್ಯದ ವಿರುದ್ಧ ಹೋರಾಡುವಂತಹ ಪ್ರಮಾಣಿಕೃತ ಮಾಸ್ಕ್ ಗಳನ್ನು ಬಳಸುವುದು ಒಳ್ಳೆಯದು. ಈಗಾಗಲೇ ಕರೋನಾ ಸಮಯದಲ್ಲಿ ಮಾಸ್ಕ ಧರಿಸಿ ಎಲ್ಲರಿಗೂ ಅಭ್ಯಾಸವಿದೆ ಹಾಗಾಗಿ ಚಳಿಗಾಲದಲ್ಲಿ ಅಥವಾ ವಾಯುಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಹೊರಗಡೆ ಓಡಾಡುವಾಗ ಆದಷ್ಟು ಮಾಸ್ಕ್ ಅಥವಾ ಉಸಿರಾಟದ ರಕ್ಷಣಾ ಸಾಧನ ಬಳಸುವುದು ಒಳ್ಳೆಯದು.
ವೈದ್ಯರ ಸಲಹೆ!
ಶ್ವಾಸಕೋಶದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರ ಸಲಹೆ ಪಡೆದುಕೊಳ್ಳುವುದನ್ನು ಮರೆಯಬೇಡಿ. ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆ ಸಾಕಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತದೆ ಸರಿಯಾಗಿ ಉಸಿರಾಡಲು ಕಷ್ಟವಾದಾಗ ಇದಕ್ಕೆ ಉತ್ತಮವಾಗಿರುವ ಗಾಳಿ ಸೇವಿಸಬೇಕು ಎನ್ನುವುದನ್ನು ಹೊರತುಪಡಿಸಿ ಇತರ ಅನಾರೋಗ್ಯಕರ ಕಾರಣಗಳು ಇರಬಹುದು ಹಾಗಾಗಿ ಇಂತಹ ಸಮಸ್ಯೆ ನಿಮ್ಮನ್ನು ಕಾಡಿದರೆ ವೈದ್ಯರ ಸಂಪರ್ಕ ಮಾಡುವುದನ್ನು ಮರೆಯಬೇಡಿ. ಜೊತೆಗೆ ಆರೋಗ್ಯಕರವಾದ ಆಹಾರ ಸೇವನೆ ಆರೋಗ್ಯಕರವಾದ ಜೀವನಶೈಲಿ ರೂಢಿಸಿಕೊಳ್ಳುವುದು ಧೂಮಪಾನ ಮಧ್ಯಪಾನದಂತಹ ಕೆಟ್ಟ ಚಟಗಳನ್ನು ಬಿಡುವುದು ಬಹಳ ಮುಖ್ಯವಾಗಿರುತ್ತದೆ. ಶ್ವಾಸಕೋಶದ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಧೂಮಪಾನ ಮಾಡಬೇಡಿ ಇದರಿಂದ ಇನ್ನಷ್ಟು ಸಮಸ್ಯೆ ಉಲ್ಬಣಗೊಳ್ಳಬಹುದು. ವಾಸ್ತವವಾಗಿ ಚಳಿಗಾಲದಲ್ಲಿ ನೀವು ನಿಮ್ಮ ಜೀವನಶೈಲಿ ಬದಲಾಯಿಸಿಕೊಂಡರಷ್ಟೇ ಶ್ವಾಸಕೋಶದ ಸಮಸ್ಯೆಯಿಂದ ದೂರ ಇರಲು ಸಾಧ್ಯ.