ಉಪ್ಪಳ: ಕಾರಡ್ಕ ಜಿ.ವಿ.ಎಚ್.ಎಸ್.ಎಸ್ ಶಾಲೆಯಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯುಪಿ ವಿಭಾಗ ಕನ್ನಡ ಕಥಾ ರಚನೆ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಜಿ ಎಚ್ ಎಸ್ ಎಸ್ ಕಾಯರ್ ಕಟ್ಟೆ ಪೈವಳಿಕೆ ಶಾಲಾ ವಿದ್ಯಾರ್ಥಿನಿ ವೈಷ್ಣವಿ ಪಡೆದುಕೊಂಡಿದ್ದಾಳೆ. ಕಳೆದ ವರ್ಷವು ಜಿಲ್ಲಾ ಕಲೋತ್ಸವದಲ್ಲಿ ವೈಷ್ಣವಿ ಪ್ರಥಮ ಸ್ಥಾನವನ್ನು ಪಡೆದಿದ್ದಳು. ಶಾಲಾ ಮುಖ್ಯೋಪಾಧ್ಯಾಯರು, ರಕ್ಷಕ ಶಿಕ್ಷಕ ಸಂಘ ವೈಷ್ಣವಿಯ ಸಾಧನೆಯನ್ನು ಅಭಿನಂದಿಸಿದ್ದಾರೆ.