ನೀಳ ಕೂದಲನ್ನು ನೋಡಿದಾಗ ಪ್ರತಿಯೊಬ್ಬರಿಗೂ ವಾವ್! ಅವರ ಕೂದಲು ಎಷ್ಟು ಚೆನ್ನಾಗಿದೆ ಎಂದು ಅನಿಸಿದೆ ಇರಲ್ಲ. ಕೆಲವರ ಕೂದಲಂತೂ ಪಾದ ಮುಟ್ಟುವಂತೆ ಇರುತ್ತದೆ, ಅಂಥವರು ನಡೆದಾಡುವಾಗ ಎಲ್ಲರ ಕಣ್ಣು ಅವರ ಕೂದಲು ಮೇಲೆ ಹೋಗುವುದು ಸಹಜ.
ಇಲ್ಲೊಬ್ಬರು ತಮ್ಮ ನೀಳ ಕೂದಲಿನ ಮೂಲಕ ದಾಖಲೆ ಬರೆದಿದ್ದಾರೆ. ಅವರ ಕೂದಲು ಬರೋಬರಿ 236.22ಸೆಂ.ಮೀ ಅಂದರೆ 7 ಅಡಿ 9 ಇಂಚು ಉದ್ದವಿದೆ. ಈ ಮೂಲಕ ಅವರು ಪ್ರಪಂಚದಲ್ಲಿಯೇ ಅತೀ ಉದ್ದದ ಕೂದಲು ಹೊಂದಿರುವ ವ್ಯಕ್ತಿಯಾಗಿದ್ದರೆ. ಅವರು ಭಾರತೀಯರು ಎನ್ನುವುದು ಇನ್ನೂ ವಿಶೇಷ.ಉದುರಿದ ಕೂದಲನ್ನು ಬಿಸಾಡುವುದೇ ಇಲ್ವಂತೆ
ಪ್ರತಿಯೊಬ್ಬರಿಗೂ ತಲೆ ಬಾಚಿದಾಗ ಸ್ವಲ್ಪ ಕೂದಲು ಬಾಚಣಿಕೆಯಲ್ಲಿ ಬರುತ್ತದೆ, ಅದನ್ನು ಬಿಸಾಡುತ್ತೇವೆ, ಆದರೆ ಇವರು ಒಂದು ಕೂದಲನ್ನು ಕೂಡ ಹೊರಗಡೆ ಬಿಸಾಡುವುದಿಲ್ವಂತೆ, ಅದನ್ನು ಸಂಗ್ರಹಿಸಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಡುತ್ತಾರಂತೆ. ಒಮ್ಮೆ ಅವರಿಗೆ ತುಂಬಾನೇ ಕೂದಲು ಉದುರಲು ಆರಂಭಿಸಿತು, ಇದರಿಂದ ಅವರಿಗೆ ತುಂಬಾನೇ ಬೇಸರ ಉಂಟಾಯ್ತು, ಅಲ್ಲಿಂದ ಉದುರಿದ ಕೂದಲನ್ನು ಬಿಸಾಡದೆ ಸಂಗ್ರಹಿಸಿಡುತ್ತೇನೆ ಎನ್ನುತ್ತಾರೆ. ಕೂದಲನ್ನು ಹೊರಗಡೆ ಬಿಸಾಡಿದರೆ ತುಂಬಾನೇ ಬೇಸರವಾಗುತ್ತೆ. ಹಾಗಾಗಿ ಕೂದಲನ್ನು ಬಿಸಾಡುತ್ತಿಲ್ವಂತೆ. 20 ವರ್ಷಗಳಿಂದ ಕೂದಲನ್ನು ಬಿಸಾಡುತ್ತಿಲ್ಲ, ಹಾಗಾಗಿ ಸಂಗ್ರಹಿಸಿದ ಕೂದಲೇ ತುಂಬಾ ಇದೆಯಂತೆ.
ಕೂದಲು ಬಿಡಲಾರಂಭಿಸಿದ ಮೇಲೆ ಕತ್ತರಿಸಲೇ ಇಲ್ಲವೇ?
ಅವರು ಕೂದಲು ಬಿಡಲಾರಂಭಿಸಿದ ಮೇಲೆ ಎರಡನೇ ಮಗು ಗರ್ಭದಲ್ಲಿದ್ದಾಗ ಹಾಗೂ ಒಮ್ಮೆ ಕಾಯಿಲೆಯಾದ ಕೂದಲಿನ ನಿರ್ವಹಣೆ ಸುಲಭವಾಗಲಿ ಎಂದು 6 ಅಡಿಯಷ್ಟು ಕೂದಲು ಕತ್ತರಿಸಲಾಯ್ತು ಎಂದು ಹೇಳಿದ್ದಾರೆ.
ಅವರು ಕೂದಲನ್ನು ತುರುಬು ಕಟ್ಟಿ ಇಟ್ಟಿರುತ್ತಾರೆ. ಒಮ್ಮೊಮ್ಮೆ ಬಿಟ್ಟಾಗ ಜನ ಅಚ್ಚರಿಯಿಂದ ಅವರ ಕೂದಲನ್ನು ನೋಡುತ್ತಾರಂತೆ. ಇಷ್ಟು ಉದ್ದದ ಕೂದಲು ನಿಜವಾಗಲೂ ಇರುತ್ತಾ ಎಂಬ ಅಚ್ಚರಿಯಲ್ಲಿ ಜನ ನೋಡುತ್ತಾರೆ. ಅಲ್ಲದೆ ಅವರ ಬಳಿ ಬಂದು ಕೂದಲನ್ನು ಮುಟ್ಟಿ ನೋಡುವುದು, ಫೋಟೋ ತೆಗೆಯುವುದು, ಸೆಲ್ಫಿ ತೆಗೆದುಕೊಳ್ಳುವುದು ಮಾಡುತ್ತಾರೆ. ಕೂದಲಿಗೆ ಏನು ಹಚ್ಚುತ್ತೀರಿ ಎಂಬೆಲ್ಲಾ ಪ್ರಶ್ನೆಗಳನ್ನೂ ಕೇಳುತ್ತಾರೆ. ಈಗ ಅವರು ಗಿನ್ನಿಸ್ ಬುಕ್‌ನಲ್ಲಿ ಅತ್ಯಂತ ಉದ್ದ ಕೂದಲಿನ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ.
ನೀಳ ಕೂದಲು ಚೆಲುವು ಹೆಚ್ಚಿಸುತ್ತೆ
ನೀಳ ಕೇಶರಾಶಿ ಹೆಣ್ಣಿಗೆ ಮತ್ತಷ್ಟು ಅಂದವನ್ನು ತಂದು ಕೊಡುತ್ತದೆ. ನೀಳ ಕೂದಲು ನೋಡುವುದೇ ಆಕರ್ಷಕ. ಮೊಣಕಾಲಿನವರೆಗೆ ನೀಳ ಕೂದಲು ಇರುವವರನ್ನು ನೋಡುತ್ತೇವೆ. ಕೂದಲು ಉದ್ದ ಬಂದಷ್ಟು ಅದರ ನಿರ್ವಹಣೆ ಮಾಡುವುದು ಕಷ್ಟ, ಹಾಗಾಗಿ ಹೆಚ್ಚಿನವರು ಕೂದಲನ್ನು ಉದ್ದ ಬಿಡುವುದಿಲ್ಲ. ಇದೀಗ ಸ್ಮಿತಾ ಅವರು ಗಿನ್ನಿಸ್ ದಾಖಲೆ ಬರೆದ ಮೇಲೆ ಆ ದಾಖಲೆ ಮುರಿಯಲು ಬೇರೆಯವರು ಪ್ರಯತ್ನ ಮಡಬಹುದೇನೋ....