ಕಾಸರಗೋಡು: ಕೇರಳದ ಮುಖ್ಯಮಂತ್ರಿ ಹಾಗೂ ಸಚಿವಸಂಪುಟ ನಡೆಸುತ್ತಿರುವ ನವಕೇರಳ ಯಾತ್ರೆ ಮರೆಯಲ್ಲಿ ಕೆಲವೊಂದು ಕ್ರಿಮಿನಲ್ ತಂಡ ವ್ಯಾಪಕ ದಾಂಧಲೆಯಲ್ಲಿ ತೊಡಗಿಸಿಕೊಮಡಿರುವುದಾಗಿ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ತಿಳಿಸಿದ್ದಾರೆ. ಅವರು ಕಾಸರಗೋಡಿನಲ್ಲಿ ವಿವಿಧ ಕಾರ್ಯಕ್ರಮಗಲಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭ ಡಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ಇಂದು ಕ್ರಿಮಿನಲ್ ಹಿನ್ನೆಲೆಯುಳ್ಳವರು ಕೇರಳವನ್ನು ಪರೋಕ್ಷವಾಗಿ ಆಳ್ವಿಕೆ ನಡೆಸುತ್ತಿದ್ದಾರೆ. ಇತ್ತ ಮುಖ್ಯಮಂತ್ರಿ ಹತಾಶೆ ಭಾವನೆಯಿಂದ ವರ್ತಿಸುತ್ತಿದ್ದಾರೆ. ಸರ್ಕಾರದ ಧೋರಣೆಯಿಂದ ರೋಸಿಹೋಗಿರುವ ಜನತೆ ತಮ್ಮ ದುಮ್ಮಾನ ಹೊರಹಾಕಲು ಮುಖ್ಯಮಂತ್ರಿ ಸಂಚರಿಸುತ್ತಿದ್ದ ಬಸ್ಸಿಗೆ ಚಪ್ಪಲಿ ಎಸೆಯುವ ಮಟ್ಟಕ್ಕೆ ತಲುಪಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ಕೆಎಸ್‍ಯು ಸಂಘಟನೆಯ ಕಾರ್ಯಕರ್ತರ ಮೇಲೆ ನರಹತ್ಯಾ ಯತ್ನದ ಕೇಸು ದಾಖಲಿಸಿರುವ ಪಿಣರಾಯಿ ಸರ್ಕಾರದ ಹತಾಶೆಯಿಂದ ವರ್ತಿಸುತ್ತಿರುವುದಾಗಿ ತಿಳಿಸಿದರು. ಡಿಸಿಸಿ ಅಧ್ಯಕ್ಷ ಪಿ.ಎ ಫೈಸಲ್ ಉಪಸ್ಥಿತರಿದ್ದರು.