HEALTH TIPS

ದೇವಾಲಯಗಳ ನಿರ್ವಹಣೆ: ಆಕ್ಸ್‌ಫರ್ಡ್‌ ಜತೆಗೂಡಿ ಹೊಸ ಕೋರ್ಸ್ ಆರಂಭಿಸಿದ ಮುಂಬೈ ವಿವಿ

            ಮುಂಬೈ: ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ಕೋರ್ಸ್ ಆರಂಭಿಸಲು ಆಕ್ಸ್‌ಫರ್ಡ್‌ನ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮುಂಬೈ ವಿಶ್ವವಿದ್ಯಾಲಯ ಒಡಂಬಡಿಕೆಗೆ ಸಹಿ ಹಾಕಿದೆ.

             ಈ ಒಡಂಬಡಿಕೆ ಅನ್ವಯ ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಈ ಡಿಪ್ಲೊಮಾ ಕೋರ್ಸ್‌ ಕಲಿಯಬಹುದಾಗಿದೆ.

               ಇತರ ಡಿಪ್ಲೊಮಾ ಕೋರ್ಸ್‌ಗಳಂತೆಯೇ ದೇವಾಲಯ ನಿರ್ವಹಣೆ ಕೋರ್ಸ್‌ ಕೂಡಾ ಇರಲಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.

              ಆಕ್ಸ್‌ಫರ್ಡ್‌ನ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ವಿಶ್ವವಿದ್ಯಾಲಯದ ಹಿಂದೂ ಅಧ್ಯಯನ ಕೇಂದ್ರ ಹಾಗೂ ಸಂಸ್ಕೃತ ವಿಭಾಗಗಳೂ ಜತೆಗೂಡಿವೆ.

ಈ ಒಡಂಬಡಿಕೆಯ ಜತೆಗೆ ಹಿಂದೂ ತತ್ವಜ್ಞಾನದ ಕುರಿತು ಸಮಗ್ರ ಅಧ್ಯಯನ ನಡೆಸಲು ಹೆಚ್ಚು ಅನುಕೂಲವಾಗಲಿದೆ ಎಂದು ಮುಂಬೈ ವಿಶ್ವವಿದ್ಯಾಲಯ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries