ಬದಿಯಡ್ಕ: ಇತ್ತೀಚಿಗೆ ಜಿ ವಿ ಎಚ್ ಎಸ್ ಎಸ್ ಕಾರಡ್ಕದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ನಾಲ್ಕು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅನ್ವಿತಾ ಟಿ ಹೈಸ್ಕೂಲ್ ವಿಭಾಗದ ವಯಲಿನ್, ಶಾಸ್ತ್ರೀಯ ಸಂಗೀತ, ಕನ್ನಡ ಕಂಠಪಾಠ, ಗಾನಾಲಾಪನಂ ನಲ್ಲಿ `ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಅನಿರುದ್ಧ ಕೆ ಎನ್ ಹೈಸ್ಕೂಲ್ ವಿಭಾಗದ ಸಂಸ್ಕೃತ ಸಮಸ್ಯಾಪೂರಣಂ, ಉಪನ್ಯಾಸ ರಚನೆ, ಭಾಷಣದಲ್ಲಿ ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಶಮಾ ವಿ ಎಮ್ ಹೈಸ್ಕೂಲ್ ವಿಭಾಗದ ಸಂಸ್ಕೃತ ಕಥಾರಚನೆಯಲ್ಲಿ ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಭಾವನಾ ನಾಯಕ್ ಹೈಸ್ಕೂಲ್ ವಿಭಾಗದ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಈ ನಾಲ್ಕೂ ಮಂದಿ ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇವರನ್ನು ಶಾಲಾ ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದೆ.