HEALTH TIPS

ಬಂಧಿತ ಡಾ.ರುವೈಸ್ ಡಾ. ವಂದನಾ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡಿದ ವ್ಯಕ್ತಿ: ಅಚ್ಚರಿಯ ಮಾಹಿತಿ ನೀಡಿದ ಪೋಲೀಸರು

            ತಿರುವನಂತಪುರಂ: ಡಾ. ಶಹನಾ ಆತ್ಮಹತ್ಯೆ ಘಟನೆಯಲ್ಲಿ ಬಂಧಿತನಾಗಿರುವ ಡಾ. ರುವೈಸ್ ವೈದ್ಯಕೀಯ ಕಾಲೇಜಿನ ಯುವ ವೈದ್ಯೆ ಡಾ.ವಂದನಾ ದಾಸ್  ಆತ್ಮಹತ್ಯೆ ಪ್ರಕರಣದಲ್ಲಿ ಹೋರಾಡಿದ್ದು, ಆತ ಮಾನವ ಹಕ್ಕುಗಳ ಕಾರ್ಯದಲ್ಲಿ ನಿರಂತರವಾಗಿ ಸಕ್ರಿಯನಾಗಿದ್ದ ಎಂದು ಪೋಲೀಸರು ಅಚ್ಚರಿಯ ಮಾಹಿತಿ ನೀಡಿದ್ದಾರೆ. 

            ಅವರು ವಂದನಾ ದಾಸ್ ಪ್ರಕರಣದಲಲಿ ಮಾಧ್ಯಮ ಸೇರಿದಂತೆ ಮಾನವ ಹಕ್ಕುಗಳ ಚಟುವಟಿಕೆಗಳ ಬಗ್ಗೆ ಪ್ರಚಾರ ಮಾಡಿದ ವ್ಯಕ್ತಿ. ಡಾ.ವಂದನಾ ದಾಸ್ ಹತ್ಯೆಗೆ ಸಂಬಂಧಿಸಿದ ಎಲ್ಲಾ ಪ್ರತಿಭಟನಾ ಪ್ರದರ್ಶನಗಳಲ್ಲಿ ಸಕ್ರಿಯವಾಗಿರುವ ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಹರಡುತ್ತಿವೆ.

           ವೈದ್ಯಕೀಯ ಕಾಲೇಜಿನ ದ್ವಿತೀಯ ವರ್ಷದ ಪಿಜಿ ವಿದ್ಯಾರ್ಥಿನಿ ಶಹನಾ ಮಂಗಳವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಳು. ಡಾ. ರುವೈಸ್ ಮತ್ತು ಶಹನಾ ಮದುವೆ ಪ್ರಸ್ತಾಪದ ವೇಳೆ ಯುವತಿ 150 ಪವನ್, ಬಿಎಂಡಬ್ಲ್ಯು ಕಾರು ಮತ್ತು ಆಸ್ತಿಗೆ ಬೇಡಿಕೆಯ ಒಡ್ಡಿದ್ದರ ತರುವಾಯ  ಒತ್ತಡದಿಂದ ತನ್ನ ಫ್ಲಾಟ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.  ರುವೈಸ್‍ನನ್ನು ಕರುನಾಗಪಲ್ಲಿಯಲ್ಲಿರುವ ಸಂಬಂಧಿಕರ ಮನೆಯಿಂದ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries