ನವದೆಹಲಿ: 25 ಕಿ.ಮೀ. ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ನಾಲ್ಕು ವೈಮಾನಿಕ ಗುರಿಗಳನ್ನು ಹೊಡೆದುರುಳಿಸುವ ಆಕಾಶ್ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯವನ್ನು ಭಾರತ ಪ್ರದರ್ಶಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಭಾನುವಾರ ಹೇಳಿದೆ.

'ಒಮ್ಮೆಗೆ ಉಡಾಯಿಸುವ ಕ್ಷಿಪಣಿ ವ್ಯವಸ್ಥೆ (ಸಿಂಗಲ್ ಫೈರಿಂಗ್ ಯುನಿಟ್) ಬಳಸಿ ಕಮಾಂಡ್ ಮಾರ್ಗದರ್ಶನದ ಮೂಲಕ 25 ಕಿ.ಮೀ. ವ್ಯಾಪ್ತಿಯಲ್ಲಿ ಮೊದಲೇ ನಿಗದಿಪಡಿಸಿದ್ದ ನಾಲ್ಕು ವೈಮಾನಿಕ ಗುರಿಗಳನ್ನು ಏಕಕಾಲದಲ್ಲಿ ಭೇದಿಸುವ ಸಾಮರ್ಥ್ಯ ಪ್ರದರ್ಶಿಸಲಾಯಿತು. ಈ ಪರೀಕ್ಷೆಯನ್ನು ಭಾರತೀಯ ವಾಯು ಪಡೆಯು ಆಕಾಶ್ ಕ್ಷಿಪಣಿ ವ್ಯವಸ್ಥೆ ಬಳಸಿ ನಡೆಸಿತು. ಇಂತಹ ಸಾಮರ್ಥ್ಯ ಹೊಂದಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ' ಎಂದು ಡಿಆರ್‌ಡಿಒ 'ಎಕ್ಸ್' ಪೋಸ್ಟ್‌ನಲ್ಲಿ ಭಾನುವಾರ ತಿಳಿಸಿದೆ.
ಭಾರತೀಯ ವಾಯುಪಡೆ ಡಿ.12ರಂದು ನಡೆಸಿದ 'ಅಸ್ತ್ರಶಕ್ತಿ' ಸೇನಾ ಸಮರಾಭ್ಯಾಸದಲ್ಲಿ ಸ್ವದೇಶಿ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯ ಪ್ರದರ್ಶಿಸಲಾಯಿತು.
ಆಕಾಶ್ ಕ್ಷಿಪಣಿ ವ್ಯವಸ್ಥೆಯ ಗುರಿ 25 ಕಿ.ಮೀ ವರೆಗಿನ ವ್ಯಾಪ್ತಿಯನ್ನು ಹೊಂದಿದೆ. ಸುಲಭ ದಾಳಿಗೆ ತುತ್ತಾಗುವ ಪ್ರದೇಶಗಳು ಮತ್ತು ಪ್ರಮುಖ ಕೇಂದ್ರಗಳನ್ನು ವೈಮಾನಿಕ ದಾಳಿಯಿಂದ ರಕ್ಷಿಸಿಕೊಳ್ಳಲು ಪ್ರಾಥಮಿಕವಾಗಿ ಬಳಸಲಾಗುವ ಸಮೀಪ ವ್ಯಾಪ್ತಿ ಶ್ರೇಣಿಯ ಮೇಲ್ಮೈ ವಾಯು ಕ್ಷಿಪಣಿ ಎನಿಸಿಕೊಂಡಿದೆ ಆಕಾಶ್ ಕ್ಷಿಪಣಿ ವ್ಯವಸ್ಥೆ. ಈ ಕ್ಷಿಪಣಿ ವ್ಯವಸ್ಥೆಯನ್ನು ಭಾರತವು ತನ್ನ ಸ್ನೇಹಿತ ರಾಷ್ಟ್ರಗಳಿಗೆ ಮಾತ್ರ ರಫ್ತು ಮಾಡುತ್ತಿದೆ.