ಕಾಸರಗೋಡು: ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಮಿಕರ ಅವಲಂಬಿತರಿಗಿರುವ ಸೆಂಟ್ರಲ್ ಪ್ರೀಮೆಟ್ರಿಕ್ ಸ್ಕಾಲರ್ ಶಿಪ್ 2023-24 ನೇ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು 2023-24 ವರ್ಷ ಇ ಗ್ರಾಂಟ್ಸ್ ಪೆÇೀರ್ಟಲ್‍ನಲ್ಲಿ ರಿಜಿಸ್ಟರ್ ಮಾಡಿದ ಜಿಲ್ಲೆಯ ಸರ್ಕಾರಿ, ಅನುದಾನಿತ ಯಾ ಅನುದಾನರಹಿತ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಜಾತಿ, ಧರ್ಮ ಮತ್ತು ಆದಾಯವನ್ನು ಲೆಕ್ಕಿಸದೆ ಅರ್ಜಿ ಸಲ್ಲಿಸಬಹುದು.
ಕಸ ಆಯುವವರು, ಮಾಲಿನ್ಯ ಸಂಗ್ರಹಿಸುವವರು, ವೇಸ್ಟ್ ತೆಗೆಯುವ ಕೆಲಸದಲ್ಲಿ ತೊಡಗಿರುವವರು ಎಂಬಿವರ ಅವಲಂಬಿತರಿಗೆ ಅರ್ಜಿ ಸಲ್ಲಿಸಬಹುದು. ಹಸಿರು ಕ್ರಿಯಾಸೇನಾ ಕಾರ್ಯಕರ್ತರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಅರ್ಹತೆಯಿರುವ ವಿದ್ಯಾರ್ಥಿಗಳು ಪೆÇೀಷಕರು ಅಥವಾ ಪೆÇೀಷಕರ ಕೆಲಸ ಸಾಬೀತುಪಡಿಸಲು ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿ, ಸಮಾಜ ಕಲ್ಯಾಣ ಅಧಿಕಾರಿಗಳ ಸಾಕ್ಷ್ಯಪತ್ರ, ಅಂಗವಿಕಲರಾಗಿದ್ದರೆ ಅದರ ಸರ್ಟಿಫಿಕೇಟ್ ಮತ್ತು ಹಾಸ್ಟೆಲರ್ ಆಗಿದ್ದರೆ ಇನ್ಮೇಟ್ ಸರ್ಟಿಫಿಕೇಟ್ ಮುಂತಾದವುಗಳೊಂದಿಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಮುಖಾಂತರ ಇ-ಗ್ರಾಂಟ್ಸ್ ಮೂಲಕ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗೆ ಅರ್ಜಿಯನ್ನು ಕಳುಹಿಸಿ, ಪ್ರಮಾಣಪತ್ರಗಳ ಪ್ರತಿಗಳನ್ನು ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯಲ್ಲಿ ಹಾಜರುಪಡಿಸಬೇಕು. ಅರ್ಜಿಯನ್ನು 2023ನೇ ಮಾ. 15ರ ವರೆಗೆ ಸವೀಕರಿಸಲಾಗುವುದು. ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಯಾ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.