ಕಲ್ಪಟ್ಟ: ವಾಹನ ಕಂಡರೆ ಓಡಿ ಮರೆಯಾಗುತ್ತಿದ್ದ ಕಾಡುಪ್ರಾಣಿಗಳು ಈಗ ಸಂತಸದಿಂದ ಸಮೀಪ ಬರುತ್ತಿವೆ ಎಂದು ಎಲ್ ಡಿಎಫ್ ಸಂಚಾಲಕ ಇ.ಪಿ. ಜಯರಾಜನ್ ಹೇಳಿದ್ದಾರೆ. ವಾಹನಗಳನ್ನು ನೋಡಿ ಖುಷಿಪಡುತ್ತಿವೆ ಎಂದವರು ತಿಳಿಸಿದ್ದಾರೆ.
ಇಂದಿನ ಆಧುನಿಕ ವಾಹನಗಳು ಶಬ್ದರಹಿತವಾಗಿವೆ. ಹಾಗಾಗಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಯಾವುದೇ ಅಪಾಯವಿಲ್ಲ. ವಾಹನಗಳನ್ನು ಕಂಡರೆ ಓಡಿ ಹೋಗುತ್ತಿದ್ದ ಪ್ರಾಣಿಗಳು ಈಗ ನೆಮ್ಮದಿಯಿಂದ ಬರುತ್ತಿವೆ ಎಂದು ಎ.ಪಿ. ಜಯರಾಜನ್ ಹೇಳಿದರು.