ತ್ರಿಶೂರ್: ರಾಷ್ಟ್ರೀಯ ಗಣಿತ ದಿನಾಚರಣೆ ನಿಮಿತ್ತ ಮಾಧವ ಮಠ ಕೇಂದ್ರದ ಆಶ್ರಯದಲ್ಲಿ ಇರಿಂಞಲಕುಡ ದೇವಸ್ಥಾನದಲ್ಲಿ ಗಣಿತ ಶಾಸ್ತ್ರಜ್ಞ ಸಂಗಮಗ್ರಾಮ ಮಾಧವನ್À ಜನ್ಮಸ್ಥಳಕ್ಕೆ ಸಂಬಂಧಿಸಿದಂತೆ ನಿನ್ನೆ ಸ್ಮರಣಾರ್ಥ ಸಭೆ ನಡೆಯಿತು. ಕೇರಳ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಮೋಹನನ್ ಕುನುಮ್ಮಲ್ ಉದ್ಘಾಟಿಸಿ ಮಾತನಾಡಿದರು. ಇರಿಂಞಲಕುಡ ಮನ ಹಾಗೂ ಶ್ರೀಕೃಷ್ಣ ದೇವಸ್ಥಾನದಲ್ಲಿ ಸಂರಕ್ಷಿಸಲಾಗಿರುವ ಮಾಧವನ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಆಧುನಿಕ ಜಗತ್ತು ಭಾರತೀಯ ಜ್ಞಾನದ ಕೊಡುಗೆಗಳನ್ನು ಎದುರು ನೋಡುತ್ತಿದೆ. ನಮ್ಮ ಗಣಿತದ ಕೊಡುಗೆಗಳು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಬಳಕೆಯಾಗುತ್ತಿವೆ. ಪ್ರಮುಖ ವಿಕಿರಣಶಾಸ್ತ್ರಜ್ಞರೂ ಆಗಿದ್ದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ನಿಖರತೆ ಸಾಧಿಸಲು ಬಳಸುವ ಗಣಿತದ ತಂತ್ರಗಳು ಕೇರಳದ ಗಣಿತಜ್ಞರ ಕೊಡುಗೆಯನ್ನು ಆಧರಿಸಿವೆ ಎಂದು ಸೂಚಿಸಿದರು.
ಕೇರಳದಲ್ಲಿ ಜ್ಞಾನ ಪರಂಪರೆಯನ್ನು ಬೆಳೆಸಲು ಉನ್ನತ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು. ಸಮಾಜದಲ್ಲಿ ಸಾಕಷ್ಟು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಎರ್ನಾಕುಳಂ ಪರಂಭಟ್ಟರ ಕೇಂದ್ರೀಯ ವಿದ್ಯಾಲಯ ಸಿದ್ಧಪಡಿಸಿರುವ ಮಾಧವನ್ ಕುರಿತ ಕಿರುಚಿತ್ರವನ್ನು ಚೆಮ್ಮಂಡ ಸಂಸ್ಕøತ ಗುರುಕುಲಂ ನಿರ್ದೇಶಕ ಡಾ. ನಂದಕುಮಾರ್ ಬಿಡುಗಡೆಗೊಳಿಸಿದರು.
ಶಿಕ್ಷಣ ವಿಕಾಸ ಕೇಂದ್ರದ ರಾಜ್ಯಾಧ್ಯಕ್ಷ ಡಾ. ಎನ್.ಸಿ.ಇಂದುಚೂಡನ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಗದ ಜಿಲ್ಲಾ ಕಾರ್ಯವಾಹ ಪಿ.ಎನ್.ಈಶ್ವರನ್, ಮಾಧವಗಣಿತ ಕೇಂದ್ರದ ಸಂಚಾಲಕ ಹಾಗೂ ಶಿಕ್ಷಾ ವಿಭಾಗದ ರಾಷ್ಟ್ರೀಯ ಸಹ ಸಂಚಾಲಕ ಎ. ವಿನೋದ್, ಇ.ಕೆ.ವಿನೋದ್ ವಾರಿಯರ್, ಪಿ.ಸಿ.ಸುಭಾಷ್, ಡಾ.ವಂದನಾ ಭಾಗವಹಿಸಿದ್ದರು.