ಕಾಸರಗೋಡು: ಸಿಪಿಎಂ ಹಿರಿಯ ಮುಖಂಡ, ಚೆರ್ವತ್ತೂರು ಮಟ್ಟಲಾಯಿ ನಿವಾಸಿ, ಮಾಜಿ ಶಾಸಕ ಕೆ. ಕುಞÂರಾಮನ್(80)ಗುರುವಾರ ನಸುಕಿಗೆ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 2006ರಿಂದ 2016ರ ವರೆಗೆ ತೃಕ್ಕರಿಪುರ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು, ಇದಕ್ಕೂ ಮೊದಲು 1979ರಿಂದ 1964ರ ವರೆಗೆ ಚೆರ್ವತ್ತೂರು ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1994ರಿಂದ 200ರ ವರೆಗೆ ಸಿಪಿಎಂ ಕಾಸರಗೋಡು ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿದ್ದರು. ಚೆರ್ವತ್ತುರು ಹಾಗೂ ತೃಕ್ಕರಿಪುರ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೂ ಕಾರಣೀಭೂತರಾಘಿದ್ದರು. ಅವರು ಪತ್ನಿ, ಐವರು ಮಕ್ಕಳನ್ನು ಅಗಲಿದ್ದಾರೆ.
ಅಂತಿಮ ದರ್ಶನ ಪಡೆದ ಸ್ಪೀಕರ್ ಎ.ಎನ್ ಶಂಸೀರ್
ಕೆರಳ ವಿಧಾನಸಭಾ ಅಧ್ಯಕ್ಷ ಎ.ಎನ್.ಶಂಸೀರ್ ಅವರು ಮಾಜಿ ಶಾಸಕ ಕೆ. ಕುಞÂರಾಮನ್ ಅವರ ಪಾರ್ಥಿವ ಶರೀರದ ಅಂತಿದರ್ಶನ ಪಡೆದರು. ಕುಞÂರಾಮನ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಕೆ. ಕುಞÂರಾಮನ್ ಅವರು ತ್ರಿಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅತ್ಯುತ್ತಮ ಶಾಸಕರಾಗಿ ಹೆಸರು ಗಳಿಸಿದ್ದರು ಎಂದು ಸ್ಪೀಕರ್ ಎ.ಎನ್.ಶಂಸೀರ್ ತಿಳಿಸಿದ್ದಾರೆ.
. ಮಾಜಿ ಶಾಸಕರಾದ ಕೆ.ಪಿ.ಸತೀಶ್ ಚಂದ್ರನ್, ಎಂ.ವಿ.ಜಯರಾಜನ್, ಟಿ.ವಿ.ರಾಜೇಶ್, ಕೆ.ವಿ.ಕುಞÂರಾಮನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಉಪಸ್ಥಿತರಿದ್ದರು. ಕೆ.ಕುಞÂರಾಮನ್ ಅವರು 2006ರಿಂದ 2016ರವರೆಗೆ ತ್ರಿಕರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು.