ಬದಿಯಡ್ಕ: ಉಬ್ರಂಗಳ ಬಡಗು ಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಉತ್ಸವದ ಅಂಗವಾಗಿ ಶ್ರೀ ಧೂಮಾವತಿ ದೈವದ ಕೋಲ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಜರಗಿದ ಪಾಟು ಉತ್ಸವ, ಶ್ರೀ ದೇವರ ದರ್ಶನ ಬಲಿ, ರಾಜಾಂಗಣ ಪ್ರಸಾದದ ನಂತರ ಧೂಮಾವತೀ ಗುಡಿಯಲ್ಲಿ ದೈವದ ತೊಡಂಗಲ್, ವಾದ್ಯಘೋಷಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ಭೇಟಿ, ನಂತರ ದೈವದ ನರ್ತನ ನಡೆಯಿತು. ಸೇರಿದ ಭಗವದ್ಭಕ್ತರಿಗೆ ಅರಸಿನಹುಡಿ ಪ್ರಸಾದ ವಿತರಣೆ, ಗುಳಿಗ ದೈವದ ಕೋಲ, ಶ್ರೀ ಕ್ಷೇತ್ರದಲ್ಲಿ ಅನ್ನದಾನ ನಡೆಯಿತು.