ತಿರುವನಂತಪುರಂ: ಪೂಜಾಪುರ ಕೇಂದ್ರ ಕಾರಾಗೃಹದ ಚಾಲಕನ ಮೇಲೆ ಕೈದಿಯಿಂದ ಹಲ್ಲೆ ನಡೆದಿದೆ. ಚಾಲಕ ರಜನೀಶ್ ಜೋಸೆಫ್ ಹಲ್ಲೆಗೊಳಗಾದವರು. ಕೊಲೆ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಜಾಯ್ ರಾಕಿ ಎಂಬವನು ಥಳಿಸಿದ್ದಾನೆ.
ನಿನ್ನೆ, ಜಾಯ್ ರಾಕಿ ಮತ್ತು ಇತರ ಕೆಲವು ಕೈದಿಗಳನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆತರಲಾಯಿತು. ಅಷ್ಟರಲ್ಲಿ ಆಸ್ಪತ್ರೆಗೆ ಬಂದವರಿಂದ ಜಾಯ್ ರಾಕಿ ಮೊಬೈಲ್ ಕೇಳಿದ್ದ. ಇದನ್ನು ಕಂಡ ರಜನೀಶ್ ಜೋಸೆಫ್ ತಡೆದದ್ದೇ ಥಳಿಸಲು ಕಾರಣ.
ರಜನೀಶ್ ಅವರ ಕುತ್ತಿಗೆ ಮತ್ತು ಎದೆಗೆ ಪೆಟ್ಟಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೈದಿಯ ವಿರುದ್ಧ ವೈದ್ಯಕೀಯ ಕಾಲೇಜು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.