ಕಾಸರಗೋಡು: ತುಳುವಿನ ಪ್ರಪ್ರಥಮ ಕ್ಯಾಲೆಂಡರ್'ಕಾಲಕೋಂದೆ'ಯ ಹನ್ನೊಂದನೇ ವರ್ಷದ ಬಿಡುಗಡೆ ಸಮಾರಂಭ ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ನೆರವೇರಿತು.
ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಸರ್ವಧರ್ಮದ ಹಬ್ಬ, ಆಚರನೆ, ಕಾಲದ ಬಗ್ಗೆ ತಿಳಿದುಕೊಳ್ಳುವ ಸಮಗ್ರ ಮಾಹಿತಿ ಕ್ಯಾಲೆಂಡರ್‍ನಲ್ಲಿ ಒಳಗೊಂಡಿದೆ.
ಸಂಕ್ರಾಂತಿ, ನಕ್ಷತ್ರಗಳು, ಕೆಡ್ಡಸ, ದೀಪಾವಳಿ, ಬಲಿ ಲೆಪ್ಪುನ ದಿನ, ಸೇರಿದಂತೆ ವಿವಿಧ ಹಬ್ಬಗಳ ಸಮಗ್ರ ಮಾಹಿತಿ ಇದರಲ್ಲಿದೆ. ಹಿಂದೂ, ಕ್ರೈಸ್ತ, ಮುಸ್ಲಿಂ, ಬೌದ್ಧ, ಜೈನ ಧರ್ಮಗಳ ಹಬ್ಬಗಳ ಬಗ್ಗೆ ಮಾಹಿತಿ ನೀಡುವ ದಿನದರ್ಶಿ ಇದಾಗಿದೆ. ಕಾಲ ಕೋಂದೆ ಕ್ಯಾಲೆಂಡರನ್ನು ತುಳುವಿನ ಪ್ರಥಮ ಗಣಕೀಕೃತ ಲಿಪಿ'ತೌಳವ'ದ ವಿನ್ಯಾಸಕಾರ ಡಾ. ಪ್ರವೀಣ್‍ರಾಜ್ ಎಸ್. ರಆವ್ ತಯಾರುಮಾಡಿದ್ದಾರೆ ಎಂದು ಮಂಜೇಶ್ವರ ಗೊವಿಂದ ಪೈ ಸ್ಮಾರಕ ಸಂಸ್ಥೆಯ ಕಾರ್ಯದರ್ಶಿ ಎಂ. ಉಮೇಶ್ ಸಾಲ್ಯಾನ್ ತಿಳಿಸಿದರು. ಈ ಸಂದರ್ಭ ತುಳು-ಕನ್ನಡ ಕಲಿಕಾ ಪುಸ್ತಕವನ್ನು ಎಂ. ಉಮೇಶ್ ಸಾಲ್ಯಾನ್ ಬಿಡುಗಡೆಗೊಳಿಸಿದರು. ಡಾ. ಪ್ರವೀಣ್‍ರಾಜ್ ಎಸ್.ರಾವ್, ರಾಮಕೃಷ್ಣ ಸಂತಡ್ಕ ಉಪಸ್ಥಿತರಿದ್ದರು.