ತಿರುವನಂತಪುರಂ: ಹಲವು ಪ್ರಕರಣಗಳನ್ನು ಸಾಬೀತುಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪೋಲೀಸ್ ಶ್ವಾನ ಕಲ್ಯಾಣಿ ಸಾವು ನಿಗೂಢವಾಗಿದೆ.
ವಿಷ ಸೇವನೆಯಿಂದ ಶ್ವಾನ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಮೂವರು ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೂಂತುರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೂಂತುರ ಶ್ವಾನದಳದ ಎಸ್‍ಐ ಉಣ್ಣಿತ್ತಾನ್ ಹಾಗೂ ನಾಯಿಗೆ ತರಬೇತಿ ನೀಡಿದ ಇಬ್ಬರು ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ನಗರ ಪೋಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ತಿರುವನಂತಪುರಂ ನಗರ ಪೆÇಲೀಸರ ಶ್ವಾನದಳದ ಸದಸ್ಯ ಕಲ್ಯಾಣಿ ನವೆಂಬರ್ 20ರಂದು ಮೃತಪಟ್ಟಿತ್ತು. ಕಲ್ಯಾಣಿಗೆ ಎಂಟು ವರ್ಷ. ಕಲ್ಯಾಣಿ ಇನ್ಸ್ ಪೆಕ್ಟರ್ ಶ್ರೇಣಿಯ ನಾಯಿ. ಅಸಹಜವಾಗಿ ಊದಿಕೊಂಡ ಹೊಟ್ಟೆಯೊಂದಿಗೆ ನಾಯಿ ಸಾವನ್ನಪ್ಪಿತ್ತು.