ಕಾಸರಗೋಡು: ಕಾರಡ್ಕದ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಸಂಸ್ಕøತ ವಿಭಾಗದ ಚಂಪೂ ಪ್ರಭಾಷಣದಲ್ಲಿ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಶಿವಾನಿ ಕೂಡ್ಲು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಈಕೆ ಕುರುಕ್ಷೇತ್ರ ಯುದ್ಧದಿಂದ ಆಯ್ದ ಕುಂತಿ ಕರ್ಣರ ಸಂವಾದದ ಭಾಗ ವನ್ನು ಪ್ರಸ್ತುತಪಡಿಸಿದ್ದಳು. ಅದೇ ಶಾಲೆಯ ಶಿಕ್ಷಕ ಕಿರಣ್ ಪ್ರಸಾದ್ ಕೂಡ್ಲು ಹಾಗೂ ಎಡನೀರು ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ರಮ್ಯ ಕೆ ಎನ್ ಅವರ ಪುತ್ರಿ.