ಪೆರ್ಲ: ಮುಳ್ಳೇರಿಯ ಕಾರಡ್ಕದ ಸರ್ಕಾರಿ ವೊಕೇಶನಲ್ ಹೈಯರ್ ಸಎಕೆಮಡರಿ ಶಾಲೆಯಲ್ಲಿ ನಡೆದ ಕಾಸರಗೋಡು ರೆವೆನ್ಯೂ ಜಿಲ್ಲಾ ಶಾಲಾ ಕಲೋತ್ಸವದ ಯಕ್ಷಗಾನದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗದ ತಂಡ 'ಎ' ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿಗಳಾದ ರಾಧಿಕಾ ಎಸ್, ಆತ್ಮೀಕ್ ಎ.ಎಸ್, ಸ್ಕಂದ ಸಿ. ಎಸ್, ಲಿಖಿತ್, ಧನುಷ್ ಬಿ, ಹೃತೇಶ್, ಚೈತನ್ಯ ಭಾಗವಹಿಸಿದ್ದರು. ಭಾಗವತರಾಗಿ ಸುಧೀಶ್ ಪಾಣಾಜೆ, ಚೆಂಡೆಯಲ್ಲಿ ವರ್ಷಿತ್ ಕಿಜೆಕ್ಕಾರು, ಮದ್ದಳೆಯಲ್ಲಿ ಯಕ್ಷರತ್ನ ರಾಘವ ಬಲ್ಲಾಳ್ ಕಾರಡ್ಕ ಸಹಕರಿಸಿದರು. ಯಕ್ಷಗನ ಕಲಾವಿದ ಬಾಲಕೃಷ್ಣ ಏಳ್ಕಾನ ಅವರ ನಿರ್ದೇಶನದಲ್ಲಿ 'ಬಬ್ರುವಾಹನ ಕಾಳಗ' ಎಂಬ ಅಖ್ಯಾನವನ್ನು ಪ್ರದರ್ಶಿಸಲಾಗಿತ್ತು.