ಕಾಸರಗೋಡು: ಆಹಾರ, ಕುಡಿಯುವ ನೀರಿಲ್ಲದೆ ಹೊರ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ 12 ಮಂದಿ ಮೀನುಗಾರರನ್ನು ಕರಾವಳಿ ಪೆÇಲೀಸರು ಹಾಗೂ ಮೀನುಗಾರರು ರಕ್ಷಿಸಿದ್ದಾರೆ.
ಮೂರು ದಿನಗಳ ಹಿಂದೆ ನೀಲೇಶ್ವರ ದಡದಿಂದ ಮೀನುಹಿಡಿಯಲು ಹೊರಟಿದ್ದ ದೋಣಿಯಲ್ಲಿ ಯಾಂತ್ರಿಕ ತಕರಾರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಮುದ್ರ ಮಧ್ಯೆ ಸಿಕ್ಕಿಹಾಕಿಕೊಮಡಿತ್ತು. ನೀಲೇಶ್ವರದಿಂದ ಹಲವಾರು ಕಿಲೋಮೀಟರ್‍ಗಳನ್ನು ಕ್ರಮಿಸಿದ ನಂತರ, ದೋಣಿಯ ಎಂಜಿನ್ ವೈಫಲ್ಯ ಕಂಡುಬಂದಿದ್ದು, ಆಳ ಸಮುದ್ರದಲ್ಲಿ ದೋಣಿ ಸಿಲುಕಿಕೊಂಡಿದೆ. ಬೋಟಿನಲ್ಲಿ ಸಂಗ್ರಹವಾಗಿದ್ದ ನೀರು, ಆಹಾರ ಖಾಲಿಯಾದ ಕಾರಣ ಮೀನುಗಾರರು ಸಮಸ್ಯೆ ಅನುಭವಿಸುತ್ತಿದ್ದರು. ಜತೆಗೆ ಫೆÇೀನಿನಲ್ಲಿ ರೇಂಜ್ ಲಬ್ಯವಾಗದೇ ದುರಿತ ಅನುಭವಿಸುವ ಮಧ್ಯೆ, ಕೊನೆಗೂ ಶಿರಿಯಾ ಕರಾವಳಿ ಪೆÇಲೀಸರ ಸಂಪರ್ಕ ಸಾಧ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ರಕ್ಷಣಾ ದೋಣಿಯ ಮೂಲಕ ಸ್ಥಳಕ್ಕಾಗಮಿಸಿದ್ದಾರೆ. ಶಿರಿಯಾ ಕರಾವಳಿ ಪೆÇಲೀಸ್ ಠಾಣೆಯ ಕಾನ್‍ಸ್ಟೆಬಲ್‍ಗಳಾದ ಮುನೀರ್, ಸೆಮೀರ್ ಮತ್ತು ಮೀನುಗಾರರ ಸಹಾಯದೊಂದಿಗೆ ಸಮುದ್ರದಲ್ಲಿ ಸಿಲುಕಿದ್ದ ದೋಣಿಯನ್ನು ಹಗ್ಗದ ಮೂಲಕ ದಡಕ್ಕೆ ಎಳೆದು ತರಲಾಯಿತು. ನಂತರ ಮೀನುಗಾರರನ್ನು ಅವರ ಮನೆಗೆ ಕಳುಹಿಸಿಕೊಡಲಯಿತು.