ನವದೆಹಲಿ: ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಯಂತ್ರೋಪಾದಿಯಲ್ಲಿ ಭರ್ತಿ ಮಾಡಲಾಗುತ್ತಿದೆ ಎಂದು ಲೋಕಸಭೆಗೆ ಬುಧವಾರ ಲಿಖಿತ ಉತ್ತರದ ಮೂಲಕ ತಿಳಿಸಲಾಯಿತು.
ನವದೆಹಲಿ: ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಯಂತ್ರೋಪಾದಿಯಲ್ಲಿ ಭರ್ತಿ ಮಾಡಲಾಗುತ್ತಿದೆ ಎಂದು ಲೋಕಸಭೆಗೆ ಬುಧವಾರ ಲಿಖಿತ ಉತ್ತರದ ಮೂಲಕ ತಿಳಿಸಲಾಯಿತು.
ಉದ್ಯೋಗ ಸೃಷ್ಟಿಗೆ ಹೆಚ್ಚಿನ ಮಹತ್ವ ನೀಡಲು ಸರ್ಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ದೇಶದಾದ್ಯಂತ 'ರೋಜಗಾರ್ ಮೇಳ'ಗಳನ್ನು ನಡೆಸಲಾಗುತ್ತಿದೆ.
'ಉದ್ಯೋಗಸೃಷ್ಟಿಯ ಜೊತೆಗೆ ಯುವಜನರಲ್ಲಿ ಉದ್ಯೋಗಾರ್ಹತೆ ಉತ್ತಮಪಡಿಸುವುದೂ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ವ್ಯಾಪಾರ ಉದ್ಯಮಕ್ಕೆ ಉತ್ತೇಜನ ನೀಡಲು ಆತ್ಮನಿರ್ಭರ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.