ಕಾಸರಗೋಡು: ಹತ್ತು ದಿವಸಗಳ ಕಾಲ ನಡೆಯಲಿರುವ ಬೇಕಲ ಅಂತಾರಾಷ್ಟ್ರೀಯ ಕರಾವಳಿ ಉತ್ಸವಕ್ಕೆ ಶುಕ್ರವಾರ ಔಪಚಾರಿಕ ಚಾಲನೆ ನೀಡಲಾಯಿತು. ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್. ಶಂಸೀರ್ ಉತ್ಸವ ಉದ್ಘಾಟಿಸಿದರು. ಬೇಕಲ ಉತ್ಸವ ಎಲ್ಲ ಸಮುದಾಯವನ್ನು ಬೆಸೆಯುವ ಉತ್ಸವವಾಗಿ ಮೂಡಿಬರಲಿದೆ. ಬೇಕಲ್ ಫೆಸ್ಟ್ ಜಾತಿ, ಮತವನ್ನು ಮೀರಿ ಎಲ್ಲಾ ಜನರು ಒಗ್ಗಟ್ಟಿನಿಂದ ಮುಂದುವರಿಯುವ ಸಂಕೇತವಾಗಲಿದೆ ಎಂದು ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎಚ್ ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಎ.ಸೈಮ, ಪಲ್ಲಿಕ್ಕರ ಗ್ರಾ.ಪಂ.ಅಧ್ಯಕ್ಷ ಎಂ.ಕುಮಾರನ್ ಅಜನೂರು ಗ್ರಾ.ಪಂ.ಅಧ್ಯಕ್ಷೆ ಟಿ.ಶೋಭಾ ಉದುಮ ಗ್ರಾ.ಪಂ.ಅಧ್ಯಕ್ಷೆ ಎಂ.ಲಕ್ಷ್ಮಿ ಮಾಜಿ ಸಂಸದೆ ಕರುಣಾಕರನ್ ಮಾಜಿ ಶಾಸಕರದ ಕೆ.ವಿ.ಕುಞÂರಾಮನ್ ಕೆ.ಕುಞÂರಾಮನ್, ಬಿಆರ್ ಡಿಸಿ ನಿರ್ದೇಶಕ ಶಾಲು ಮ್ಯಾಥ್ಯೂ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿಟಿ ಸುರೇಂದ್ರನ್ ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು. ಅಮತಾರಷ್ಟ್ರೀಯ ಬೇಕಲ್ ಉತ್ಸವ ಡಿ.31ರ ವರೆಗೆ ಜರುಗಲಿದೆ.