ಕುಂಬಳೆ: ಭೂಮಿ ಪ್ರತಿಷ್ಠಾನ ಧಾರವಾಡ, ಅರವಳದ ಪ್ರತಿಷ್ಠಾನ ಸತ್ತೂರು-ದಿ.ಯಲ್ಲಪ್ಪ ಅರವಳದ ಅವರ ಸ್ಮರಣಾರ್ಥ ಕರ್ನಾಟಕ ರಾಜ್ಯ ಮಟ್ಟದ (ಹೊರನಾಡ ಕನ್ನಡಿಗರೂ ಸೇರಿ) ಭೂಮಿ ಸಾಹಿತ್ಯ ಪುರಸ್ಕಾರಕ್ಕಾಗಿ ಖ್ಯಾತ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅವರ 'ಬೇರುಗಳು ಅಮ್ಮನ ಹಾಗೆ' ಕವನ ಸಂಕಲನ ಆಯ್ಕೆಯಾಗಿದೆ.
ವಿವಿಧೆಡೆಯಿಂದ ಲಭಿಸಿದ ಬೇರೆ ಬೇರೆ ಸಾಹಿತ್ಯ ಪ್ರಕಾರಗಳ ಒಟ್ಟು ಎಪ್ಪತ್ತಾರು ಕೃತಿಗಳಲ್ಲಿ ತೀರ್ಪುಗಾರರು ಆರಿಸಿದ ಭೂಮಿ ಉತ್ತಮ ಹತ್ತು ಕೃತಿಗಳಲ್ಲಿ (ಭೂಮಿ ಟಾಪ್ ಟೆನ್ ಕೃತಿಗಳು) ಈ ಕವನ ಸಂಕಲನ ಆಯ್ಕೆ ಮಾಡಲಾಗಿದೆ.
ಡಿ. 23ರಂದು ಧಾರವಾಡದ ಕರ್ನಾಟಕ ವಿದ್ಯವರ್ಧಕ ಸಂಘ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.