ಕುಂಬಳೆ: ಯುವಮೋರ್ಚಾ ಕುಂಬಳೆ ಮಂಡಲ ಆಶ್ರಯದಲ್ಲಿ ಶುಕ್ರವಾರ ಸ್ವರ್ಗೀಯ ಕೆ ಟಿ ಜಯಕೃಷ್ಣನ್ ಮಾಸ್ತರ್ ಅವರ ಬಲಿದಾನ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ರ್ಪಾನೆಗೈದು ಸಂಸ್ಮರಣ ಕಾರ್ಯಕ್ರಮ ಕುಂಬಳೆಯಲ್ಲಿ ನಡೆಯಿತು.
ಬಿಜೆಪಿ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಪುಷ್ಪನಮನ ಸಲ್ಲಿಸಿದರು. ಯುವಮೋರ್ಚ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕೇರಳ ಕೌನ್ಸಿಲ್ ಸದಸ್ಯ ವಿ.ರವೀಂದ್ರನ್ ಮಾತನಾಡಿ, ಕೆ.ಟಿ. ಜಯಕೃಷ್ಣ ಮಾಸ್ತರ್ ಅವರ ಕಾರ್ಯವೈಖರಿ ವಿವರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಕುಮಾರ್ ಅನಂತಪುರ, ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ ಕೋಳಾರು, ಬಿಜೆಪಿ ಉಪಾಧ್ಯಕ್ಷೆ ಪುಷ್ಪ ಅಮೆಕ್ಕಳ, ಮಂಡಲ ಕಾರ್ಯದರ್ಶಿ ಧನರಾಜ ಪ್ರತಾಪ್ ನಗರ, ಬಿಜೆಪಿ ಕುಂಬಳೆ ಪಂಚಾಯತಿ ಘಟಕ ಅಧ್ಯಕ್ಷ ಸುಜಿತ್ ರೈ ಹಾಗೂ ಬ್ಲಾಕ್ ಸದಸ್ಯರು ಮತ್ತು ವಾರ್ಡ್ ಸದಸ್ಯರು ಭಾಗವಹಿಸಿ ಪುμÁ್ಪರ್ಚನೆ ಗೌರಾರ್ಪಣೆ ಸಲ್ಲಿಸಿದರು.