ಬದಿಯಡ್ಕ: ಅಂತರಾಷ್ಟ್ರೀಯ ಏಡ್ಸ್ ದಿನಾಚರಣೆಯ ಅಂಗವಾಗಿ ಕುಂಬ್ಡಾಜೆ ಗ್ರಾಮ ಪಂಚಾಯತಿ, ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರ ಹಾಗೂ ಅಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜಾಗೃತಿ ರ್ಯಾಲಿ ಅಗಲ್ಪಾಡಿಯಲ್ಲಿ ನಡೆಯಿತು.
ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸಳಿಗೆ ಅವರು ರ್ಯಾಲಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ, ವಾರ್ಡ್ ಸದಸ್ಯ ಹರೀಶ್ ಗೋಸಾಡ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಭಾಗವಹಿಸಿದ್ದರು. ಅಗಲ್ಪಾಡಿ ಶಾಲಾ ಮೈದಾನದಿಂದ ಆರಂಭವಾದ ರ್ಯಾಲಿ ಮಾರ್ಪನಡ್ಕ ಪೇಟೆಯಲ್ಲಿ ಸಮಾರೋಪಗೊಂಡಿತು. ವೈದ್ಯಾಧಿಕಾರಿ ಸೈಯದ್ ಹಮೀದ್ ಶುಹೈಬ್ ಸ್ವಾಗತಿಸಿ, ಆರೋಗ್ಯ ನಿರೀಕ್ಷಕ ಬೈಜು ಎಸ್.ರಾಮ್ ವಂದಿಸಿದರು.