ತಿರುವನಂತಪುರ: ಡಾ. ಶಹನಾ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತ ಡಾ. ರುವೈಸ್ ತಂದೆಯ ವಿರುದ್ಧವೂ ಪೋಲೀಸರು ಆರೋಪಿಯನ್ನಾಗಿ ಸೇರಿಸಿದ್ದಾರೆ.
ತಂದೆಯೂ ವರದಕ್ಷಿಣೆಗಾಗಿ ಒತ್ತಡ ಹೇರಿದ್ದರು ಎಂದು ಶಹನಾ ತಾಯಿ ಹೇಳಿಕೆ ನೀಡಿದ ಬೆನ್ನಲ್ಲೇ ರುವೈಸ್ ತಂದೆಯೂ ಪ್ರಕರಣದಲ್ಲಿ ಆರೋಪಿಯಾದರು.
ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ಕರುನಾಗಪಳ್ಳಿಯಲ್ಲಿರುವ ರುವೈಸ್ ಮನೆಗೆ ಬೀಗ ಹಾಕಲಾಗಿದೆ. ನಿನ್ನೆ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರೂ ರುವೈಸ್ ತಂದೆ ಪತ್ತೆಯಾಗಿಲ್ಲ ಎಂದು ಪೆÇಲೀಸರು ವಿವರಣೆ ನೀಡಿದ್ದಾರೆ.
ರುವೈಸ್ ಹಾಗೂ ಆತನ ಸಂಬಂಧಿಕರು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಶಹನಾ ಸಂಬಂಧಿಕರು ತಿಳಿಸಿದ್ದಾರೆ. ರುವೈಸ್ ಮತ್ತು ಸಂಬಂಧಿಕರು ನೇರವಾಗಿ ಹಣಕ್ಕಾಗಿ ಒತ್ತಡ ಹೇರಿದ್ದರು ಎಂದು ಶಹನಾ ಆತ್ಮಹತ್ಯೆ ಪತ್ರದಲ್ಲಿ ಹೇಳಲಾಗಿದೆ. ಕೊನೆ ಗಳಿಗೆಯಲ್ಲಿ ರುವೈಸ್ ಮತ್ತು ಅವರ ಕುಟುಂಬದವರು ಮದುವೆಯಿಂದ ಪಲಾಯನಗೈದರು.
ಸಂಬಂಧದಿಂದ ಹಿಂದೆ ಸರಿದಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶಹನಾ ಬೆಳಗ್ಗೆ ರುವೈಸ್‍ಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದು, ರುವೈಸ್ ನಂಬರ್ ಬ್ಲಾಕ್ ಮಾಡಿದ್ದಾಳೆ. ಇದರಿಂದ ಶಹಾನಾ ಮಾನಸಿಕ ಸ್ಥಿತಿ ಹದಗೆಟ್ಟಿತ್ತು ಎಂದು ಪೋಲೀಸರು ಅಭಿಪ್ರಾಯಪಟ್ಟಿದ್ದಾರೆ. ರುವೈಸ್ ಬಂಧನಕ್ಕೂ ಮುನ್ನ ಶಹನಾ ಸಂದೇಶವನ್ನು ಅಳಿಸಿ ಹಾಕಿದ್ದ. ಸಹಾಯಕ ಆಯುಕ್ತರ ವಿಚಾರಣೆ ವೇಳೆ ಶಹನಾ ಸಂದೇಶ ಕಳುಹಿಸಿದ್ದನ್ನು ರುವೈಸ್ ಒಪ್ಪಿಕೊಂಡಿದ್ದಾನೆ. ಶಹನಾ ಅವರ ಮೊಬೈಲ್ ಪೋನ್ ನಿಂದಲೂ ಪೋಲೀಸರಿಗೆ ಈ ಬಗ್ಗೆ ಪುರಾವೆಗಳು ಸಿಕ್ಕಿವೆ.