ಮಂಜೇಶ್ವರ : ಸಂಪುಷ್ಟ ಕೇರಳಂ ಯೋಜನೆಯಡಿ ಮಂಜೇಶ್ವರ ಬ್ಲಾಕ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಬ್ಲಾಕ್ ಕಾರ್ಡಿನೇಟರ್ ಹುದ್ದೆ ಖಾಲಿ ಇದೆ. ಅರ್ಹತೆ ಯಾವುದೇ ಪದವಿ, ಟೆಕ್ನಾಲಜಿ ಅಂಡ್ ಸಾಫ್ಟ್‌ವೇರ್ ಅಪ್ಲಿಕೇಷನ್ ಸಪೋರ್ಟಿನಲ್ಲಿ ಎರಡು ವರ್ಷಗಳ ಕೆಲಸದ ಅನುಭವ. ಮಲಯಾಳ ಮತ್ತು ಕನ್ನಡ ಭಾಷೆಗಳಲ್ಲಿ ಸಂವಹನ ನಡೆಸಲು ಪ್ರಾವೀಣ್ಯತೆ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಅರ್ಹತೆಯನ್ನು ಸಾಬೀತುಪಡಿಸುವ ಎಲ್ಲಾ ಮೂಲ ಸರ್ಟಿಫಿಕೇಟ್ ಹಾಗೂ ಅದರ ಪ್ರತಿಗಳು ಮತ್ತು ಪಾಸ್‌ಪೋರ್ಟ್ ಸೈಜ್ ಫೋಟೋದೊಂದಿಗೆ ಡಿಸೆಂಬರ್ 13 ರಂದು ಬೆಳಿಗ್ಗೆ 10.30ಕ್ಕೆ ಕಾಸರಗೋಡು ಸಿವಿಲ್ ಸ್ಟೇಷನ್‌ನಲ್ಲಿ ಜಿಲ್ಲಾ ಮಟ್ಟದ ಐ.ಸಿ.ಡಿ.ಎಸ್ ಸೆಲ್ ಎ-ಬ್ಲಾಕ್ ನಲ್ಲಿ ನಡೆಸುವ ಸಂದರ್ಶನಕ್ಕೆ ಹಾಜರಾಗಬೇಕು. ವಯಸ್ಸಿನ ಮಿತಿ 35 ವರ್ಷಗಳು. ದೂರವಾಣಿ ಸಂಖ್ಯೆ 9847996149.