ಕಾಸರಗೋಡು: ಬೇಕಲ ಬೀಚ್ ಉತ್ಸವ ನಡೆಯುವ ಹಾಗೂ ರೆಡ್ ಮೂನ್ ಬೀಚ್ ಪಾರ್ಕ್ ಇರುವ ಬೇಕಲ ಬೀಚ್‍ನಲ್ಲಿ ಸ್ಥಾಪಿಸಲಾದ ªನಿರೀಕ್ಷಣಾ ಗೋಪುರವನ್ನು ಬೇಕಲ್ ಟೂರಿಸಂ ಫ್ರೆಟರ್ನಿಟಿ ಅಧ್ಯಕ್ಷ ಸೈಫುದ್ದೀನ್ ಕಳನಾಡ್ ಉದ್ಘಾಟಿಸಿದರು.
ಪ್ರಸಕ್ತ ಜಿಲ್ಲೆಯ ಬೇಕಲ ಕೋಟೆ ಬೀಚ್‍ನಲ್ಲಿ ಇಬ್ಬರು ಹಾಗೂ ಬೇಕಲ ಬೀಚ್ ಪಾರ್ಕ್‍ನಲ್ಲಿ ಇಬ್ಬರು ಜೀವ ರಕ್ಷಕರು ಮಾತ್ರ ಇದ್ದು, ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವದರಿಂದ ಈ ಸಂಖ್ಯೆ ಹೆಚ್ಚಿಸಬೇಕಾದ ಅನಿವಾರ್ಯತೆಯಿದೆ. ಹೆಚ್ಚಿನ ಲೈಫ್‍ಗಾರ್ಡ್‍ಗಳ ನೇಮಿಸುವುದರ ಜತೆಗೆ ಅವರಿಗೆ ಸರ್ಕಾರದ ವಿಮಾ ಸವಲತ್ತೂ ಒದಗಿಸಿಕೊಡುವಂತೆ ಸೈಫುದ್ದೀನ್ ಕಳನಾಡ್ ಆಗ್ರಹಿಸಿದರು. ರೆಡ್ ಮೂನ್ ಬೀಚ್ ಪಾರ್ಕ್ ಅಧ್ಯಕ್ಷ ಶಿವದಾಸ್, ನಿರ್ದೇಶಕ ಸುರೇಶ್ ಬೇಕಲ್, ಜೀವರಕ್ಷಕರಾದ ನಿತಿನ್ ಮತ್ತು ಮಹೇಶ್ ಅವರಿಗೆ ಪ್ರೀತಿಯ ಉಡುಗೊರೆ ನೀಡಿದರು
ರೆಡ್ ಮೂನ್ ಬೀಚ್ ಪಾರ್ಕ್ ಅಧ್ಯಕ್ಷ ಶಿವದಾಸ್ ಮತ್ತು ನಿರ್ದೇಶಕ ಸುರೇಶ್ ಅವರು ಬೇಕಲ ಜೀವರಕ್ಷಕರಾದ ನಿತಿನ್ ಮತ್ತು ಮಹೇಶ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.