ಲಂಡನ್: ಭಾರತ ಸೇರಿದಂತೆ ವಿದೇಶಗಳಿಂದ ಕೇರ್ ಟೇಕರ್‌ಗಳಾಗಿ ಉದ್ಯೋಗಕ್ಕೆ ತೆರಳುವವರನ್ನು ಬ್ರಿಟನ್‌ನಲ್ಲಿ ಶೋಷಿಸಲಾಗುತ್ತಿದೆ ಎಂದು ಕೇರಳ ಮೂಲದ ಪತ್ರಕರ್ತರೊಬ್ಬರು ಬಹಿರಂಗಪಡಿಸಿದ್ದಾರೆ.
ಲಂಡನ್: ಭಾರತ ಸೇರಿದಂತೆ ವಿದೇಶಗಳಿಂದ ಕೇರ್ ಟೇಕರ್‌ಗಳಾಗಿ ಉದ್ಯೋಗಕ್ಕೆ ತೆರಳುವವರನ್ನು ಬ್ರಿಟನ್‌ನಲ್ಲಿ ಶೋಷಿಸಲಾಗುತ್ತಿದೆ ಎಂದು ಕೇರಳ ಮೂಲದ ಪತ್ರಕರ್ತರೊಬ್ಬರು ಬಹಿರಂಗಪಡಿಸಿದ್ದಾರೆ.
ಬ್ರಿಟನ್ ಪತ್ರಕರ್ತ ಬಾಲಕೃಷ್ಣ ಬಾಲಗೋಪಾಲ್ ಅವರು ಸ್ವತಃ ಕೇರ್‌ಟೇಕರ್ ಸೋಗಿನಲ್ಲಿ ಕೆಲಸಕ್ಕೆ ಸೇರಿ ಅಕ್ರಮವನ್ನು ಪತ್ತೆ ಮಾಡಿದ್ದಾರೆ.
'ಬಿಬಿಸಿ ಪನೋರಮಾ' ಸುದ್ದಿಮಾಧ್ಯಮದಲ್ಲಿ ಸೋಮವಾರ ಸಂಜೆ ಈ ತನಿಖಾ ವರದಿಯ ಕಾರ್ಯಕ್ರಮ ಪ್ರಸಾರವಾಗಿದೆ. ಭಾರತೀಯ ನೇಮಕಾತಿ ಏಜೆನ್ಸಿಗಳು ಸಾವಿರಾರು ಪೌಂಡ್‌ಗಳನ್ನು ನೀಡಿ ಕೇರ್‌ಟೇಕರ್‌ಗಳನ್ನು ವಿದೇಶಗಳಿಗೆ ಕಳುಹಿಸುತ್ತವೆ. ಅಲ್ಲಿಗೆ ತೆರಳುವವರು ದೀರ್ಘಕಾಲ ಕೆಲಸ ಮಾಡುವ ಒಪ್ಪಂದಕ್ಕೆ ಒಳಪಡಬೇಕಾಗುತ್ತದೆ. ಒಂದು ವೇಳೆ ಅರ್ಧಕ್ಕೇ ಕೆಲಸ ತೊರೆದಲ್ಲಿ ಸಾಕಷ್ಟು ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಕೇರ್ ಟೇಕರ್‌ಗಳಾಗಿ ಬರುವ ಉದ್ಯೋಗಿಗಳಿಗೆಂದೇ ಕಳೆದ ವರ್ಷ 1,40,000 ವೀಸಾ ವಿತರಣೆ ಮಾಡಲಾಗಿದೆ. ಈ ಪೈಕಿ 39,000 ವೀಸಾಗಳನ್ನು ಭಾರತೀಯರಿಗೆ ನೀಡಲಾಗಿದೆ.