ಚೆನ್ನೈ: ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಮಿಳು ನಟ ವಿಶಾಲ್ ಮನೆಯಲ್ಲಿ ಸಿಲುಕಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು 24 ಗಂಟೆಯ ಬಳಿಕ ರಕ್ಷಿಸಲಾಗಿದೆ.
ಚೆನ್ನೈ: ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಮಿಳು ನಟ ವಿಶಾಲ್ ಮನೆಯಲ್ಲಿ ಸಿಲುಕಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು 24 ಗಂಟೆಯ ಬಳಿಕ ರಕ್ಷಿಸಲಾಗಿದೆ.
ಚೆನ್ನೈನ ಕರಪಕಮ್ ಪ್ರದೇಶದಲ್ಲಿರುವ ವಿಶಾಲ್ ಮನೆಯಲ್ಲಿ ಅಮೀರ್ ಖಾನ್ ಉಳಿದುಕೊಂಡಿದ್ದರು.
ಮಳೆಯಿಂದಾಗಿ ಮನೆಯ ಸುತ್ತಮುತ್ತ ನೀರು ತುಂಬಿರುವ ಬಗ್ಗೆ ನಟ ವಿಶಾಲ್ ಎಕ್ಸ್ ತಾಣದಲ್ಲಿ ಹಂಚಿಕೊಂಡಿದ್ದು, ತಕ್ಷಣ ಸಹಾಯಕ್ಕೆ ಧಾವಿಸಿ ರಕ್ಷಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಪೋಸ್ಟ್ ಮಾಡಿದ್ದ ಅವರು, ಸಹಾಯಕ್ಕೆ ಕರೆ ಮಾಡಿದ್ದೇನೆ ವಿದ್ಯುತ್, ವೈಫೈ, ಮೊಬೈಲ್ ನೆಟ್‌ವರ್ಕ್ ಕೂಡ ಕಟ್ ಆಗಿದೆ. ಮನೆಯ ಟೆರೆಸ್ ಮೇಲೆ ಸಣ್ಣ ಪ್ರಮಾಣದಲ್ಲಿ ಸಿಗ್ನಲ್ ದೊರೆತ ಕಾರಣ ಸಹಾಯ ಕೋರಲು ಸಾಧ್ಯವಾಯಿತು ಎಂದು ಬರೆದುಕೊಂಡಿದ್ದರು.
ವಿಶಾಲ್ ರಕ್ಷಣಾ ಕಾರ್ಯಾಚರಣೆಯ ಪೋಟೊ ಹಂಚಿಕೊಂಡಿದ್ದು, ಅದರಲ್ಲಿ ಅಮೀರ್ ಖಾನ್, ಜ್ವಾಲಾ ಗುಟ್ಟಾ ಸಹ ಕಾಣಿಸಿಕೊಂಡಿದ್ದಾರೆ
ತಾಯಿಯ ಚಿಕಿತ್ಸೆಗಾಗಿ ಅಮೀರ್ ಕಾನ್ ಅವರು ಕೆಲವು ತಿಂಗಳ ಹಿಂದೆ ಚೆನ್ನೈನಲ್ಲಿ ವಾಸ್ತವ್ಯ ಹೂಡಿದ್ದರು.,