ತಿರುವನಂತಪುರಂ: ಕೆಎಸ್‍ಆರ್‍ಟಿಸಿಯ ದೈನಂದಿನ ಆದಾಯ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಶನಿವಾರದ ದಿನದ ಗಳಿಕೆಯು 9.055 ಕೋಟಿ ರೂಪಾಯಿಗಳಷ್ಟಿದ್ದು, ಡಿಸೆಂಬರ್ 11 ರ 9.03 ಕೋಟಿ ರೂಪಾಯಿಗಳನ್ನು ಮೀರಿಸಿದೆ.
ದಾಖಲೆ ಆದಾಯದ ಹಿಂದೆ ಕೆಎಸ್‍ಆರ್‍ಟಿಸಿ ಆಡಳಿತ ಮಂಡಳಿ ಹಾಗೂ ನೌಕರರ ಸಂಘಟಿತ ಪ್ರಯತ್ನವಿದೆ ಎಂದು ಸಿಎಂಡಿ ಹೇಳಿರುವರು.
ಹೆಚ್ಚಿನ ಬಸ್‍ಗಳನ್ನು ವ್ಯವಸ್ಥೆಗೊಳಿಸುವ ಮೂಲಕ, ಆಫ್-ರೋಡ್ ದರವನ್ನು ಕಡಿಮೆ ಮಾಡುವ, ಹೆಚ್ಚುವರಿ ಟ್ರಿಪ್ ಗಳು, ಶಬರಿಮಲೆ ಸೇವೆ ನಿರ್ವಹಿಸುವ ಬಸ್‍ಗಳು ಅನುಗುಣವಾದ ಸೇವಾ ಬಸ್‍ಗಳು ಮತ್ತು ಸಿಬ್ಬಂದಿಗಳನ್ನು ಒದಗಿಸಲು ಸಾಧ್ಯವಾಯಿತು ಎಂದು ಸಿಎಂಡಿ ಹೇಳಿದರು.
ಕೆಎಸ್‍ಆರ್‍ಟಿಸಿ ದಿನಕ್ಕೆ 10 ಕೋಟಿ ಆದಾಯದ ಗುರಿ ಹೊಂದಿದೆ. ಆದರೆ ಹೆಚ್ಚಿನ ಹೊಸ ಬಸ್‍ಗಳು ಬರಲು ವಿಳಂಬವಾಗುತ್ತಿರುವುದು ಅಡ್ಡಿಯಾಗಿದ್ದು, ಇದಕ್ಕೆ ಪರಿಹಾರವಾಗಿ ಎನ್‍ಸಿಸಿ ಮತ್ತು ಜಿಸಿಸಿ ಷರತ್ತುಗಳ ಅಡಿಯಲ್ಲಿ ಹೆಚ್ಚಿನ ಬಸ್‍ಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಿಎಂಡಿ ತಿಳಿಸಿದ್ದಾರೆ.