ಪೆರ್ಲ: ಪೆರ್ಲದ ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜಿನ ನಾಲಂದ ಸ್ಕಿಲ್ ಡೆವೆಲಪ್‍ಮೆಂಟ್ ಸೆಂಟರ್(ಎನ್‍ಎಸ್‍ಡಿಸಿ)ಗೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯª ನ್ಯಾಶನಲ್ ಯೂತ್ ಪ್ರೋಗ್ರಾಮ್ ಆಶ್ರಯದಲ್ಲಿ ಯುವ ಉದ್ಯೋಗ ಕೌಶಲ್ಯ ತರಬೇತಿ ಸಹಕಾರಿ ವಿದ್ಯಾಭ್ಯಾಸ ಸಂಘದ ಮೂಲಕ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ 3 ತಿಂಗಳಿಂದ 12 ತಿಂಗಳ ವರೆಗಿನ ವಿವಿಧ ಕಂಪ್ಯೂಟರ್ ಕೋರ್ಸುಗಳಿಗೆ ಅಂಗೀಕಾರ ನೀಡಿದೆ.
ಈ ಯೋಜನೆಯಡಿಯಲ್ಲಿ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ ಕೋರ್ಸ್, ಅಡ್ವಾನ್ಸ್ ಡಿಪ್ಲೊಮಾ ಕೋರ್ಸ್‍ಗಳ ಸರ್ಟಿಫಿಕೇಟ್ ಗಳನ್ನು ಯೂತ್ ಎಂಪ್ಲೋಯೆಬಿಲಿಟಿ ಸ್ಕಿಲ್ ಟ್ರೈನಿಂಗ್ ಕೋಓಪರೇಟಿವ್ ಎಜುಕೇಶನಲ್ ಸೊಸೈಟಿ ಲಿಮಿಟೆಡ್ ನೀಡಲಿದೆ. 55 ರಷ್ಟು ಕಂಪ್ಯೂಟರ್ ತರಬೇತಿ ಕೋರ್ಸ್ ಗಳಿದ್ದು ಆದ್ಯತೆಯ ಅನುಗುಣವಾಗಿ ಟ್ಯಾಲಿ, ಎಂ.ಎಸ್ ಆಫೀಸ್, ಡಾಟಾ ಎಂಟ್ರಿ, ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್, ಡಿಪ್ಲೊಮಾ ಇನ್ ಡಾಟ ಎಂಟ್ರಿ ಆಪರೇಟರ್ಸ್, ಡಿಪ್ಲೊಮಾ ಇನ್ ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಅಕೌಂಟಿಂಗ್ ವಿದ್ ಜಿಎಸ್‍ಟಿ ಸೇರಿದಂತೆ 8 ಕೋರ್ಸುಗಳ ತರಗತಿಗಳು ಜನವರಿಯಿಂದ ಆರಂಭವಾಗಲಿವೆ. ಹೆಚ್ಚಿನ ಮಾಹಿತಿಗಾಗಿ vvs nalanda college.edu.in ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.