ತಿರುವನಂತಪುರಂ: ರಾಜ್ಯಪಾಲರ ಮೇಲಿನ ದಾಳಿ ಯತ್ನಗೈದ ಎಸ್‍ಎಫ್‍ಐ ಅನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯಪಾಲರು ಹೇಳುತ್ತಿರುವುದು ಮತ್ತು ಮಾಡುತ್ತಿರುವುದು ಸಂವಿಧಾನ ವಿರೋಧಿಯಾಗಿದ್ದು, ರಾಜ್ಯಪಾಲರ ವಿರುದ್ಧ ಎಸ್‍ಎಫ್‍ಐನ ಪ್ರಬಲ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಂ.ವಿ.ಗೋವಿಂದನ್ ಹೇಳಿದರು. ಎಸ್‍ಎಫ್‍ಐ ಕಾರ್ಯಕರ್ತರು ರಾಜ್ಯಪಾಲರ ವಾಹನದ ಮುಂದೆ ಹಾರಿ ಪ್ರತಿಭಟಿಸಲಿಲ್ಲ ಎಂದರು.
ಇದು ಐದನೇ ಬಾರಿ ಅವರ ಮೇಲೆ ನಡೆಸುವ ಹಲ್ಲೆ ಯತ್ನವಾಗಿದೆ ಎಂದು ರಾಜ್ಯಪಾಲರು ಆರೋಪಿಸಿದ್ದಾರೆ. ರಾಜ್ಯ ಸರಕಾರದ ನೆರವಿನಿಂದ ಸರ್ಕಾರ ಪೆÇಲೀಸರನ್ನು ಬಳಸಿಕೊಂಡು ರಾಜ್ಯಪಾಲರ ವಿರುದ್ಧ ಇಂತಹ ಅವ್ಯವಸ್ಥೆ ಸೃಷ್ಟಿಸುತ್ತಿದೆ. ಎಸ್‍ಎಫ್‍ಐ ಕಾರ್ಯಕರ್ತರಿಗೆ ಮಾಹಿತಿ ಸೋರಿಕೆ ಮಾಡಿದ್ದು ಪೆÇಲೀಸ್ ವರಿಷ್ಠರು. ರಾಜ್ಯ ಗುಪ್ತಚರ ಇಲಾಖೆ ನೀಡಿರುವ ವರದಿ ವಿಷಯ ಗಂಭೀರವಾಗಿತ್ತು ಎಂದು ರಾಜ್ಯಪಾಲರು ತಿಳಿಸಿರುವರು.
ಪೋಲೀಸ್ ವಾಹನದಲ್ಲಿಯೇ ಹಲ್ಲೆಕೋರರನ್ನು ಕರೆತಂದು ವಾಪಸ್ ಕರೆದುಕೊಂಡು ಹೋಗಲಾಗಿದೆ ಎಂದು ರಾಜ್ಯಪಾಲರು ಬಹಿರಂಗವಾಗಿ ಹೇಳಿದ್ದರು. ಮುಖ್ಯಮಂತ್ರಿಗಳೇ ಈ ಷಡ್ಯಂತ್ರದ ನೇತೃತ್ವ ವಹಿಸಿದ್ದಾರೆ ಎಂದು ರಾಜ್ಯಪಾಲರು ಆರೋಪಿಸಿದ್ದಾರೆ.