ಕಾಸರಗೋಡು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಹಿಂದುಳಿದ ವರ್ಗ ಅಭಿವೃದ್ಧಿ ಇಲಾಖೆಯ ಮೂಲಕ ಜಾರಿಗೊಳಿಸುವ ಪಿ.ಎಮ್ ವೈ.ಎ.ಎಸ್.ಎ.ಎಸ್.ವಿ.ಐ ಒ.ಬಿ.ಸಿ, ಇ.ಬಿ.ಸಿ ಪೆÇೀಸ್ಟ್-ಮೆಟ್ರಿಕ್ ಸ್ಕಾಲರ್‍ಶಿಪ್ (2023-24) ಯೋಜನೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸರ್ಕಾರಿ, ಅನುದಾನಿತ ಶಾಲೆಗಳ ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ, ಸಿ.ಎ, ಸಿ.ಎಮ್.ಎ, ಸಿ.ಎಸ್ (ಫೌಂಡೇಶನ್ ಕೋರ್ಸ್‍ಗಳನ್ನು ಹೊರತುಪಡಿಸಿ) ರಾಜ್ಯದೊಳಗಿನ ಕೇಂದ್ರೀಯ ಸಂಸ್ಥೆಗಳಲ್ಲಿ ವಿವಿಧ ಪೆÇೀಸ್ಟ್ ಮೆಟ್ರಿಕ್ ಕೋರ್ಸ್‍ಗಳು, ರಾಜ್ಯದ ಹೊರಗೆ ರಾಷ್ಟ್ರೀಯ ಪ್ರಾಮುಖ್ಯತೆಯಿರುವ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಇತರ ಸರ್ಕಾರಿ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳಿಗೆ ಮೆರಿಟ್ ಯಾ ರಿಸರ್ವೇಷನ್ ಮೂಲಕ ಪ್ರವೇಶ ಪಡೆದು ಅಧ್ಯಯನ ನಡೆಸುವ ಹಿಂದುಳಿದ ವರ್ಗದಲ್ಲಿರುವ ಕುಟುಂಬದ ಆದಾಯ 2.5 ಲಕ್ಷ ರೂಪಾಯಿ ಮೀರದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ ಡಿಸೆಂಬರ್ 15 ಆಗಿದ್ದು, ಹೆಚ್ಚಿನ ವಿವರಗಳಿಗಾಗಿ ವೆಬ್‍ಸೈಟ್ www.egrantz.kerala.gov.in, www.bcdd.kerala.gov.in ಸಂದರ್ಶಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (0495 2377786)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.