ಕಾಸರಗೋಡು: ಬೇಕಲ ಅಂತಾರಾಷ್ಟ್ರೀಯ ಕರಾವಳಿ ಉತ್ಸವಕ್ಕೆ ಡಿ. 22ರಂದು ಸಂಜೆ 5ಕಕೆ ಸಂಭ್ರಮದ ಚಾಲನೆ ಲಭಿಸಲಿದೆ. ಹತ್ತು ದಿವಸಗಳ ಕಾಲ ಬೇಕಲ ಕರಾವಳಿಯಲ್ಲಿ ನಡೆಯಲಿರುವ ವೈವಿಧ್ಯಪೂರ್ಣ ಸಮಾರಂಭಕಕೆ ನಾಡು ಸಜ್ಜಾಗಿ ನಿಂತಿದೆ.
ಕೇರಳ ವಿಧಾನಸಭಾ ಸ್ಪೀಕರ್ ಎ.ಎನ್ ಶಂಸೀರ್ ಕರಾವಳಿ ಉತ್ಸವ ಉದ್ಘಾಟಿಸುವರು. ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್ ಕುಞಂಬು ಅಧ್ಯಕ್ಷತೆ ವಹಿಸುವರು. ಸಂಸದ, ಜಿಲ್ಲೆಯ ಶಾಸಕರು, ಇತರ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು. ಜನಪರ ಸಮಿತಿ ಹೆಸರಲ್ಲಿ ಅಂತಾರಾಷ್ಟ್ರೀಯ ಉತ್ಸವ ನಡೆಸಲಾಗುತ್ತಿದ್ದು, ಇದಕ್ಕೆ ಸರ್ಕಾರದ ಅಧೀನದಲ್ಲಿರುವ ಬಿಆರ್‍ಡಿಸಿ, ಕೆಟಿಡಿಸಿ, ಕುಟುಂಬಶ್ಸರೀ ಸೇರಿದಂತೆ ವಿವಿಧ ಇಲಾಖೆಗಳು ಸಹಕಾರ ನೀಡುತ್ತಿದೆ. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಕನ್ವೀನರ್ ಅಗಿರುವ ಸಮಿತಿಯಲ್ಲಿ ವಇವಿಧ ಇಲಾಖೆಗಳನ್ನು ಸಂಯೋಜಿಸಿಕೊಮಡು ಕಾರ್ಯಕ್ರಮ ನಡೆಸಲಾಗುತ್ತಿದೆ. ಎರಡು ವೇದಿಕೆಗಳಲ್ಲಿ ನಿರಂತರ ಕಲಾ ಕಾರ್ಯಕ್ರಮ ನಡೆದುಬರಲಿದೆ. ಹಿರಿಯರಿಗೆ ನೂರು ರೂ. ಹಾಗೂ ಮಕ್ಕಳಿಗೆ 25ರೂ. ಟಿಕೆಟ್ ದರ ನಿಗದಿಪಡಿಸಲಾಗಿದ್ದು, ಉತ್ಸವದಲ್ಲಿ ನಡೆಯುವ ಕಲಾ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿರಲಿದೆ. ಕಾರ್ಯಕ್ರಮದ ಪೂವಭಾವಿಯಾಗಿ ಆಯೋಜಿಸಲಾದ ಪ್ರಚಾರ ಕಾರ್ಯಕ್ರದಲ್ಲಿ ಮುತ್ತೈದೆಯರಿಂದ ತಿರುವಾದಿರ ಆಯೋಜಿಸಲಾಗಿತ್ತು.