ಎರ್ನಾಕುಳಂ: ರಾಷ್ಟ್ರಪಿತನ ಪ್ರತಿಮೆಗೆ ಅವಮಾನ ಮಾಡಿದ ಎಸ್‍ಎಫ್‍ಐ ನಾಯಕನ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಕಿಡಿಕಾರಿದ್ದಾರೆ.
ಎಸ್‍ಎಫ್‍ಐ ಆಲುವಾ ಏರಿಯಾ ಸಮಿತಿ ಸದಸ್ಯ ಹಾಗೂ ಚುಂಡಿ ಭಾರತ್ ಮಾತಾ ಕಾನೂನು ಕಾಲೇಜು ಯೂನಿಯನ್ ಪದಾಧಿಕಾರಿ ಆದಿ ನಾಸರ್ ಮಹಾತ್ಮ ಗಾಂಧಿ ಪ್ರತಿಮೆಗೆ ಅವಮಾನ ಮಾಡಿದ್ದಾರೆ. ಕಮ್ಯುನಿಸ್ಟ್ ಪಕ್ಷದೊಳಗೆ ದೇಶವಿರೋಧಿಗಳು ಮತ್ತು ಭಯೋತ್ಪಾದಕರು ತುಂಬಿಕೊಳ್ಳುತ್ತಿದ್ದಾರೆ ಎಂದು ಕೆ.ಸುರೇಂದ್ರನ್ ಹೇಳಿದ್ದಾರೆ.
ಕಮ್ಯುನಿಸ್ಟ್ ಪಕ್ಷವು ದೇಶ ವಿರೋಧಿ ಮತ್ತು ಭಯೋತ್ಪಾದಕ ಮನಸ್ಸುಗಳಿಂದ ತುಂಬಿದೆ. ಇಂತಹ ಅಪಸವ್ಯಗಳು ಸಹಿಸುವಂತದ್ದಲ್ಲ. ಕೇರಳ ಪೋಲೀಸರು ಬಂಧಿಸಿ ಜೈಲಿಗಟ್ಟುವ ಧೈರ್ಯ ತೋರಬೇಕು ಎಂದು ಕೆ.ಸುರೇಂದ್ರನ್ ಒತ್ತಾಯಿಸಿದ್ದಾರೆ.
ಕ್ರಿಸ್ ಮಸ್ ಆಚರಣೆ ವೇಳೆ ಕಾಲೇಜಿನಲ್ಲಿರುವ ಗಾಂಧಿ ಪ್ರತಿಮೆಗೆ ನಾಸರ್ ತಂಪು ಕನ್ನಡಕ ಹಾಕಿ ಇದರ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದ. ಪೋಟೋ ತೆಗೆಯುವಾಗ ಗಾಂಧೀಜಿ ಹೇಗಿದ್ದರೂ ಸತ್ತಿರುವರಲ್ಲ ಎಂದು ಹೇಳುವುದನ್ನು ಕೇಳಿಸಿಕೊಳ್ಳಬಹುದು. ಪೋಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.